ಕಾಸರಗೋಡು: ಮಾಜಿ ಪ್ರಧಾನಿ ಅಟಲ್‍ಬಿಹಾರಿ ವಾಜ್‍ಪೇಯಿ ಸಂಸ್ಮರಣಾ ಸಮಾರಂಭ ಸೋಮವಾರ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಕಚೇರಿ ಡಾ. ಶ್ಯಾಂ ಪ್ರಸಾದ್ ಮುಖರ್ಜಿ ಮಂದಿರದಲ್ಲಿ ಜರುಗಿತು. ಬಿಜೆಪಿ ಜಲ್ಲಾ ಸಮಿತಿ ಅಧ್ಯಕ್ಷ ಕೆ.ಶ್ರೀಕಾಂತ್ ಸಂಸ್ಮರಣಾ ಭಾಷಣ ಮಾಡಿ, ಅಟಲ್‍ಬಿಹಾರಿ ವಾಜ್‍ಪೇಯಿ ಅವರು ತಮ್ಮ ರಾಜಕೀಯ ಮುತ್ಸದ್ಧಿತನ ಹಾಗೂ ಚುರುಕುಮುಟ್ಟಿಸುವ ಆಡಳಿತದಿಂದ ವಿಶ್ವಮಾನ್ಯರಾಗುವುದರ ಜತೆಗೆ ವಿರೋಧಪಕ್ಷಗಳಿಂದಲೂ ಪ್ರಶಂಸೆಗೆ ಪಾತ್ರರಾಗಿದ್ದರು. ಭಾರತದೇಶದ ಕೀರ್ತಿಪತಾಕೆಯನ್ನು ವಿಶ್ವಾದ್ಯಂತ ಪಸರಿಸಿದ ಧೀಮಂತ ನೇತಾರರಾಗಿದ್ದರು ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾ ಸಮಿತಿ ಕಾರ್ಯದರ್ಶಿ ಎನ್. ಸತೀಶನ್ ಅಧ್ಯಕ್ಷತೆ ವಹಿಸಿದ್ದರು. ವಿಜಯಕುಮಾರ್ ರೈ, ಧನಂಜಯ ಮಧೂರ್ ಮುಂತಾದವರು ಉಪಸ್ಥಿತರಿದ್ದರು. ಅಟಲ್‍ಬಿಹಾರಿ ವಾಜ್‍ಪೇಯಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಯಿತು.