ಕೊಚ್ಚಿ: ವಿಧಾನಸಭಾ ಚುನಾವಣೆಯಲ್ಲಿ ಯುಡಿಎಫ್ ಸೋಲುತ್ತದೆ ಎಂದು ನನಗೆ ಮೊದಲೇ ತಿಳಿದಿತ್ತು ಎಂದು ಕಾಂಗ್ರೆಸ್ ಸಂಸದ ರಾಜಮೋಹನ್ ಉಣ್ಣಿತ್ತಾನ್ ಹೇಳಿದ್ದಾರೆ. ಕಾಂಗ್ರೆಸ್ ನ ಸಾಂಸ್ಥಿಕ ರಚನೆ ತುಂಬಾ ದುರ್ಬಲವಾಗಿದೆ ಎಂದು ಅವರು ಹೇಳಿದರು. ಉಣ್ಣಿತ್ತಾನ್ ಅವರ ಬಹಿರಂಗ ಹೇಳಿಕೆ ಕಾಂಗ್ರೆಸ್ಸ್ ನ ಇರಿಸುಮುರಿಸಿಗೆ ಕಾರಣವಾಗಿದೆ.
"ಅಸೆಂಬ್ಲಿ ಚುನಾವಣೆಯಲ್ಲಿ ಸೋಲನ್ನು ಮೊದಲೇ ನಿರೀಕ್ಷಿಸಲಾಗಿತ್ತು. ಕಾಂಗ್ರೆಸ್ ಸಂಘಟನಾತ್ಮಕ ರಚನೆ ದುರ್ಬಲವಾಗಿತ್ತು. ಸಾಂಪ್ರದಾಯಿಕವಾಗಿ ಕಾಂಗ್ರೆಸ್‍ಗೆ ಮತ ಹಾಕುವವರು ಕಾಂಗ್ರೆಸ್ ನಿಂದ ದೂರವಾಗಿದ್ದರು" ಎಂದು ಉಣ್ಣಿತ್ತಾನ್ ಹೇಳಿದರು. ದಾರಿತಪ್ಪಿದವರನ್ನು ಮರಳಿ ಕರೆತರುವಲ್ಲಿ ಕಾಂಗ್ರೆಸ್ ವಿಫಲವಾಗಿದೆ ಎಂದು ಅವರು ಆರೋಪಿಸಿದರು.
ಕಾಂಗ್ರೆಸ್ ನ ಜೊತೆಗಿದ್ದ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯಗಳು ತಮ್ಮನ್ನು ದೂರ ಮಾಡಿಕೊಂಡವು. ಜೋಸ್ ಕೆ ಮಣಿ ಯುಡಿಎಫ್ ತೊರೆದಿರುವುದು ಹಿನ್ನಡೆಯಾಗಿದೆ ಎಂದು ಅವರು ಹೇಳಿದರು. ಮೊದಲು ವೈಫಲ್ಯವನ್ನು ಗಮನಿಸಿದ್ದೆ ಆದರೆ ಅದನ್ನು ಬಹಿರಂಗವಾಗಿ ಹೇಳಲಿಲ್ಲ ಎಂದು ಅವರು ಹೇಳಿದರು.