HEALTH TIPS

ಹಸಿರು ಸೊಪ್ಪು-ತರಕಾರಿಗಳು ಕ್ಯಾನ್ಸರ್ ಕಾರಕ ರಾಸಾಯನಿಕದಿಂದ ಕೂಡಿದೆಯೇ, ಇಲ್ಲವೇ ಚೆಕ್ ಮಾಡುವುದು ಹೇಗೆ?

               ಇಂದು ಮಾರುಕಟ್ಟೆಯಲ್ಲಿ ಲಭ್ಯವಿರುವ ಹೆಚ್ಚಿನ ತರಕಾರಿಗಳು ರಾಸಾಯನಿಕಗಳಿಂದ ತುಂಬಿಕೊಂಡಿವೆ. ಹೆಚ್ಚು ಕಾಲ ಫ್ರೆಶ್ ಆಗಿರಲೇಂದು, ಇವುಗಳಿಗೆ ರಾಸಾಯನಿಕ ಬೆರಕೆ ಮಾಡಿರುತ್ತಾರೆ. ಇಷ್ಟಪಟ್ಟು ತಂದ ಹಣ್ಣು-ತರಕಾರಿಗಳು ರಾಸಾಯನಿಕಯುಕ್ತವಾಗಿವೇ ಅಥವಾ ನೈಸರ್ಗಿಕವಾಗಿವೆಯೇ ಎಂಬುದನ್ನು ಕಂಡುಹಿಡಿಯುವುದು ತುಂಬಾ ಕಷ್ಟ. ಆದರೆ, ಸರಿಯಾದದನ್ನು ಆರಿಸುವುದು ಬಹಳ ಮುಖ್ಯ ಏಕೆಂದರೆ ರಾಸಾಯನಿಕಯುಕ್ತ ತರಕಾರಿ ಸೇವನೆಯು ಬಹಳಷ್ಟು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.


               ಇಂತಹ ಒಂದು ರಾಸಾಯನಿಕದಲ್ಲಿ ಮಲಾಕೈಟ್ ಗ್ರೀನ್ ಕೂಡ ಒಂದು. ಇದನ್ನು ಹಸಿರು ಸೊಪ್ಪು ಮತ್ತು ತರಕಾರಿಗಳು ಹೆಚ್ಚು ಕಾಲ ತಾಜಾವಾಗಿ ಇರುವಂತೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ಭಾರತದ ಆಹಾರ ಸುರಕ್ಷಾ ಮತ್ತು ಮಾನದಂಡ ಪ್ರಾಧಿಕಾರ (ಎಫ್ ಎಸ್ ಎಸ್ ಐ ಐ) ಸಂಸ್ಥೆ ಎಚ್ಚರಿಕೆಯನ್ನು ನೀಡಿದೆ. ಏಕೆಂದರೆ ಇದು ಕ್ಯಾನ್ಸರ್ ಜನಕ ರಾಸಾಯನಿಕವಾಗಿದೆ. ತರಕಾರಿಯನ್ನು ಈ ರಾಸಾಯನಿಕದ ಬಳಕೆಯಿಂದ ತಾಜಾ ಕಾಣುವಂತೆ ಮಾಡಿದ್ದರೆ ಇದನ್ನು ಪರೀಕ್ಷಿಸುವುದು ಹೇಗೆ ಎಂಬ ಬಗ್ಗೆ ಪ್ರಾತ್ಯಕ್ಷಿತೆಯನ್ನು ವಿಡೀಯೋ ಮೂಲಕ ಸಂಸ್ಥೆ ಹೇಳಹೊರಟಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ:

                       ಮಲಾಕೈಟ್ ಗ್ರೀನ್ ಎಂದರೇನು?:

          ಮಲಾಕೈಟ್ ಗ್ರೀನ್ ಎಂಬುದು ಒಂದು ಸಾವಯವ ಸಂಯುಕ್ತವಾಗಿದ್ದು, ಬಟ್ಟೆಗಳಿಗೆ ಬಣ್ಣ ನೀಡಲು ಮತ್ತು ಕೃಷಿಯಲ್ಲಿ ಅತಿಸೂಕ್ಷ್ಮ ಜೀವಿಗಳ ವಿರುದ್ದ ಔಷಧಿಯಾಗಿಯೂ ಬಳಸಲಾಗುತ್ತದೆ. ಈ ಮಲಾಕೈಟ್ ಗ್ರೀನ್ ಶಿಲೀಂಧ್ರಗಳು ಮತ್ತು ಬ್ಯಾಕ್ಟೀರಿಯಾಗಳ ವಿರುದ್ಧ ಪರಿಣಾಮಕಾರಿ. ಮೀನಿನ ಉದ್ಯಮದಲ್ಲಿ, ಮೊಟ್ಟೆಗಳು ಮತ್ತು ಮೀನಿನ ಮರಿಗಳನ್ನು ಕೊಲ್ಲುವ ಸಪ್ರೊಲೆಗ್ನಿಯಾ ಶಿಲೀಂಧ್ರವನ್ನು ನಿಯಂತ್ರಿಸಲು ಇದನ್ನು ಬಳಸಲಾಗುತ್ತದೆ. ಮಾತ್ರವಲ್ಲ, ಮೆಣಸಿನಕಾಯಿ, ಬಟಾಣಿ ಮತ್ತು ಪಾಲಕ ಉತ್ಪಾದನೆಯಲ್ಲಿಯೂ ಇದನ್ನು ಬಳಸಲಾಗತ್ತಿದ್ದು, ತರಕಾರಿಗಳನ್ನು ಹಸಿರು ಮತ್ತು ತಾಜಾವಾಗಿ ಕಾಣುವಂತೆ ಮಾಡುತ್ತದೆ.

             ವರದಿಗಳ ಪ್ರಕಾರ 1877 ರಲ್ಲಿ ವಿಜ್ಞಾನಿ ಹರ್ಮನ್ ಫಿಶರ್ ಎಂಬುವರು ಬೆಂಜಾಲ್ಡಿಹೈಡ್ ಮತ್ತು ಡೈಮೀಥೈಲ್‌ಅನಿಲಿನ್ ಎಂಬ ರಾಸಾಯನಿಕಗಳನ್ನು 1:2 ರ ಅಣ್ವಿಕ ಅನುಪಾದದಲ್ಲಿ ಸಲ್ಫ್ಯೂರಿಕ್ ಆಮ್ಲದ ಜೊತೆಗೆ ಬೆರೆಸಿ ತಯಾರಿಸಿದ್ದರು. ಬಹಳ ಮುಖ್ಯ ವಿಚಾರವೆಂದರೆ, ಇದ ಕ್ಯಾನ್ಸರ್ ಜನಕ ರಾಸಾಯನಿಕವಾಗಿದ್ದು, ಇದರ ಬಳಕೆಯನ್ನು ಅಮೆರಿಕಾದಲ್ಲಿ ನಿಷೇಧ ಮಾಡಲಾಗಿದೆ, ಆದರೆ ಭಾರತದಲ್ಲಿ ಎಗ್ಗಿಲ್ಲದೇ ಬಳಕೆಯಾಗುತ್ತಿರುವುದು ವಿಪರ್ಯಾಸ.

                     ಇದು ಏಕೆ ಅಪಾಯಕಾರಿ?:

            ಬಯೋಟೆಕ್ನಾಲಜಿ ಇನ್ಫರ್ಮೇಶನ್ ನ್ಯಾಷನಲ್ ಸೆಂಟರ್ (NCBI ) ಪ್ರಕಾರ, ಇದೊಂದು ವಿಷಕಾರಿ ರಾಸಾಯನಿಕವಾಗಿದ್ದು, ಸಮಯ ಕಳೆದಂತೆ, ತಾಪಮಾನ ಹೆಚ್ಚಿದಂತೆ, ಸಾಂದ್ರತೆ ಹೆಚ್ಚುತ್ತಾ ಹೋದಂತೆ ಇದರ ವಿಷದ ಪ್ರಭಾವವೂ ಹೆಚ್ಚುತ್ತಾ ಹೋಗುತ್ತದೆ. ಈ ರಾಸಾಯನಿಕ ಕ್ಯಾನ್ಸರ್ ಜನಕವಾಗಿದ್ದು, ನಮ್ಮ ದೇಹದ ಪ್ರತಿ ಜೀವಕೋಶದಲ್ಲಿರುವ ಡಿ ಎನ್ ಎ ಗಳ ರಚನೆಯನ್ನೇ ಬದಲಿಸಬಲ್ಲ ಮ್ಯೂಟಾಜೆನೆಸಿಸ್, ಕ್ರೋಮೋಸೋಮುಗಳ ತುಂಡಾಗುವಿಕೆ, ಶ್ವಾಸಕೋಶಗಳಲ್ಲಿ ವಿಷ ಕಾಣಿಸಿಕೊಳ್ಳುವುದು ಮೊದಲಾದ ತೊಂದರೆಗಳಿಗೆ ಗುರಿಯಾಗಬಹುದು.

                    ತರಕಾರಿಗಳಲ್ಲಿ ಮಲಾಕೈಟ್ ಗ್ರೀನ್ ಪತ್ತೆ ಮಾಡುವುದು ಹೇಗೆ?

            FSSAI ಹಸಿರು ತರಕಾರಿಗಳಲ್ಲಿ ಮಲಾಕೈಟ್ ಗ್ರೀನ್ ಬಳಕೆಯನ್ನ ಪತ್ತೆಹಚ್ಚಲು ನಮಗೆ ಸಹಾಯ ಮಾಡುವ ಮಾರ್ಗವನ್ನು ಕಂಡುಕೊಂಡಿದ್ದು, ಇದರ ಅಪಾಯಕಾರಿ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ತನ್ನ ಟ್ವಿಟರ್‌ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದೆ. ಈ ಹಂತಗಳ ಮೂಲಕ ಪರೀಕ್ಷೆ ಮಾಡಿ, ರಾಸಾಯನಿಕ ಬಳಕೆಯಾಗಿದೆಯೇ, ಇಲ್ಲವೇ ಎಂಬುದನ್ನು ಅರಿತುಕೊಳ್ಳಬಹುದು.

1. ಮೊದಲ ಭಾಗದಲ್ಲಿ ಟಿಶ್ಯೂ ಕಾಗದವೊಂದನ್ನು ಲಿಕ್ವಿಡ್ ಪ್ಯಾರಾಫಿನ್ ನಲ್ಲಿ ಅದ್ದಿ, ನೀವು ತಂದಿರುವ ತರಕಾರಿಯ ಹೊರಗಿನ ಭಾಗವನ್ನು ಮೆಲ್ಲನೇ ಉಜ್ಜಿ. ತರಕಾರಿಯಲ್ಲಿ ಯಾವುದೇ ರಾಸಾಯನಿಕದ ಲೇಪನ ಇಲ್ಲದಿದ್ದರೆ ಟಿಶ್ಯೂ ಕಾಗದ ಹಸಿರು ಬಣ್ಣಕ್ಕೆ ಬರುವುದಿಲ್ಲ. ಒಂದು ವೇಳೆ ರಾಸಾಯನಿಕದ ಬಳಕೆಯಾಗಿದ್ದರೆ, ಕಾಗದ ಕೊಂಚ ಹಸಿರಾಗುತ್ತದೆ.

2. ಎರಡನೆಯ ಭಾಗದಲ್ಲಿ, ಸ್ವಲ್ಪ ಬಟಾಣಿ ಕಾಳುಗಳನ್ನು ಬ್ಲಾಟಿಂಗ್ ಪೇಪರ್ ಮೇಲೆ ಹರಡಿ. ಹೀರು ಕಾಗದ ಲಭ್ಯವಿಲ್ಲದೇ ಇದ್ದರೆ ನೀರನ್ನು ಸುಲಭವಾಗಿ ಹೀರಿಕೊಳ್ಳುವ ಟಿಶ್ಯೂ ಅಥವಾ ಹತ್ತಿಯ ಇತರ ಕಾಗದವೂ ಆಗಬಹುದು. ಸ್ವಲ್ಪ ಹೊತ್ತು ಬಿಟ್ಟು ಬಟಾಟಿ ಕಾಳುಗಳು ಇದ್ದ ಭಾಗದಲ್ಲಿ ಹಸಿರು ಚುಕ್ಕೆಗಳು ಮೂಡಿವೆಯೇ ನೋಡಿ. ರಾಸಾಯನಿಕ ಇಲ್ಲದಿದ್ದರೆ ಕಾಗದದ ಮೇಲೆ ಯಾವುದೇ ಬಣ್ಣ ಇರುವುದಿಲ್ಲ. ರಾಸಾಯನಿಕ ಇದ್ದರೆ ಕಾಗದದ ಮೇಲೆ ಹಸಿರು ಬಣ್ಣ ಚುಕ್ಕೆ ಅಥವಾ ವೃತ್ತಾಕಾರದಲ್ಲಿ ಕಾಣಿಸಿಕೊಳ್ಳುತ್ತದೆ. ಇಂತಹ ತರಕಾರಿ, ಸೊಪ್ಪು, ಕಾಳುಗಳನ್ನು ಸೇವಿಸದಿರುವುದು ಉತ್ತಮ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries