ಮಧೂರು: ಮಧೂರು ಚೇನಕ್ಕೋಡು ಶ್ರೀ ರಕ್ತೇಶ್ವರೀ ಬಾಲಗೋಕುಲ ಸಮಿತಿ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮಕ್ಕಳಿಗಾಗಿ ವಿವಿಧ ಕ್ರೀಡಾ ಕಾರ್ಯಕ್ರಮ ಜರುಗಿತು. ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರದ ಮಾನದಂಡ ಪ್ರಕಾರ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಸಂದರ್ಭ ಕಣ್ಣೂರು ವಇಶ್ವ ವಿದ್ಯಾಲಯ ವತಿಯಿಂದ ನಡೆಸಲಾದ ಬಿ.ಎ ಪದವಿ ಕನ್ನಡದಲ್ಲಿ ಪ್ರಥಮ ರ್ಯಾಂಕ್ ಗಳಿಸಿದ ಎನ್. ರಕ್ಷಾ, ಇಂಗ್ಲಿಷ್‍ನಲ್ಲಿ ಒಂದನೇ ರ್ಯಾಂಕ್ ಗಳಿಸಿದ ಆದಿರ, ಬಿ.ಎಸ್ಸಿಯಲ್ಲಿ ಪ್ರಥಮ ರ್ಯಾಂಕ್ ಗಳಿಸಿದ ದಿಯಾ ಅವರನ್ನು ಅಭಿನಂದಿಸಲಾಯಿತು. ಬಾಲಗೋಕುಲ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.