ಕಾಸರಗೋಡು: ಎಂಡೋಸಲ್ಫಾನ್ ಸಂತ್ರ್ಸತರಿಗಾಗಿ ಸತ್ಯಸಾಯಿ ಆರ್ಫನೇಜ್ ಟ್ರಸ್ಟ್ ಎಣ್ಮಕಜೆ ಮತ್ತು ಪುಲ್ಲೂರು-ಪೆರಿಯ ಗ್ರಾಮ ಪಂಚಾಯತ್ ಗಳಲ್ಲಿ ನಿರ್ಮಿಸಿರುವ ಮನೆಗಳ ವಿತರಣೆ ಸಂಬಂಧ ವಸತಿಯಿಲ್ಲದ ಮತ್ತು ಜಾಗವಿಲ್ಲದ ಎಂಡೋಸಲ್ಫಾನ್ ಸಂತ್ರಸ್ತರಿಂದ ಅರ್ಜಿ ಕೋರಲಾಗಿದೆ. ಅರ್ಜಿದಾರರು ಎಂಡೋಸಲ್ಫಾನ್ ಸಂತ್ರಸ್ತರ ಪಟ್ಟಿಯಲ್ಲಿ ಸೇರಿದವರೂ, ಸ್ವಂತ ಮನೆ, ಜಾಗ ಇಲ್ಲದವರೂ, ಪರಂಪರಾಗತವಾಗಿ ಜಾಗ ದೊರೆಯುವ ಸಾಧ್ಯತೆಗಳು ಇಲ್ಲದೆ ಇರುವವರೂ ಆಗಿರಬೇಕು. ಭೂಹಕ್ಕು ಪತ್ರ ಲಭಿಸಿದ ದಿನಾಂಕದಿಂದ 90 ದಿನಗಳೊಳಗೆ ಭೂಹಕ್ಕು ಜಾಗದಲ್ಲಿ ಶಾಶ್ವತ ನಿವಾಸಿಯಾಗದೇ ಇದ್ದಲ್ಲಿ ಭೂಹಕ್ಕು ರದ್ದುಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ತಿಳಿಸಿದರು.