ತಿರುವನಂತಪುರ: ಕೇರಳದಲ್ಲಿ ಕೊರೋನಾ ಹರಡುವಿಕೆ ಏರುಗತಿಯಲ್ಲಿರುವ ಕಾರಣ ನಾಳೆ(ಸೋಮವಾರ) ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಪರಿಶೀಲನಾ ಸಭೆ ನಡೆಯಲಿದೆ. ಟಿಪಿಆರ್ ದರ ಶೇ.15 ಕ್ಕಿಂತ ಹೆಚ್ಚಿದ್ದರೆ ನಿಬರ್ಂಧಗಳನ್ನು ಬಿಗಿಗೊಳಿಸುವ ಸಾಧ್ಯತೆಯಿದೆ. ಭಾನುವಾರ ವಾರಾಂತ್ಯದ ಲಾಕ್‍ಡೌನ್ ಓಣಂ ಹಬ್ಬಾಚರಣೆಯ ಕಾರಣ ಇರಲಿಲ್ಲ. ಕಳೆದ ಭಾನುವಾರವೂ ಲಾಕ್‍ಡೌನ್ ಇದ್ದಿರÀಲಿಲ್ಲ.
ಇದೇ ವೇಳೆ, ರಾಜ್ಯದಲ್ಲಿ ಕೋವಿಡ್ ಹೆಚ್ಚಳ ಕಳವಳಕಾರಿಯಾಗಿದೆ. ದೇಶದ ಇತರ ರಾಜ್ಯಗಳಲ್ಲಿ ಎರಡನೇ ತರಂಗ ಕಡಿಮೆಯಾಗುತ್ತಿದ್ದರೆ, ಕೇರಳದಲ್ಲಿ ರೋಗಿಗಳ ಸಂಖ್ಯೆ ಇನ್ನೂ ಹೆಚ್ಚುತ್ತಿದೆ. ನೂರು ಜನರಲ್ಲಿ ್ತ11 ಕ್ಕಿಂತ ಹೆಚ್ಚು ಜನರಿಗೆ ಸೋಂಕು ಪತ್ತೆಯಾಗುತ್ತಿರುವುದು ಸೋಂಕಿನ ವ್ಯಾಪಕತೆಯ ಸಂಕೇತವಾಗಿದೆ. ಮಲಪ್ಪುರಂ, ಕೋಝಿಕ್ಕೋಡ್, ತ್ರಿಶೂರ್ ಮತ್ತು ಎರ್ನಾಕುಳಂ ಜಿಲ್ಲೆಗಳಲ್ಲಿ ಅತೀ ಹೆಚ್ಚಿನ ಕೋವಿಡ್ ಪ್ರಕರಣಗಳಿವೆ.
ರಾಜ್ಯದಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾದಂತೆ, ಆಸ್ಪತ್ರೆಗಳಲ್ಲಿ ಹಾಸಿಗೆಗಳು ಮತ್ತು ಐಸಿಯುಗಳು ವೇಗವಾಗಿ ತುಂಬಿ ತುಳುಕುತ್ತಿದೆ. ರಾಜ್ಯದಲ್ಲಿ ಶನಿವಾರ ಪರೀಕ್ಷಾ ಧನಾತ್ಮಕ ದರವು ಶೇ.17.73 ಕ್ಕೆ ಏರಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ಪರಿಶೀಲನಾ ಸಭೆ ಕರೆಯಲಿದ್ದು, ನಿರ್ಬಂಧಗಳನ್ನು ಬಿಗಿಗೊಳಿಸುವುದು ಸೇರಿದಂತೆ ವಿಷಯಗಳ ಕುರಿತು ನಿರ್ಧಾರ ತೆಗೆದುಕೊಳ್ಳಲಿದೆ.