ನವದೆಹಲಿ: ಆಗಸ್ಟ್ ತಿಂಗಳ ತಮ್ಮ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ ಒಲಂಪಿಕ್ಸ್‌ನಲ್ಲಿ ಕ್ರೀಡಾಪಟುಗಳ ಸಾಧನೆ, ಕೃಷ್ಣ ಜನ್ಮಾಷ್ಠಾಮಿ, ಸ್ವಚ್ಛ ಭಾರತ ಅಭಿಯಾನ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
ಒಲಿಂಪಿಕ್ಸ್‌ನಲ್ಲಿ ಈ ಬಾರಿ ದೇಶದ ಕ್ರೀಡಾಪಟುಗಳ ಸಾಧನೆ, ಸ್ವಚ್ಛ ಭಾರತ ಅಭಿಯಾನ, ಆತ್ಮ ನಿರ್ಭರ ಭಾರತ... ಹೀಗೆ ಹಲವು ವಿಚಾರಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ತಿಂಗಳ ರೇಡಿಯೊ ಕಾರ್ಯಕ್ರಮ 'ಮನದ ಮಾತು (ಮನ್ ಕೀ ಬಾತ್)'ವಿನಲ್ಲಿ ಭಾನುವಾರ ಪ್ರಸ್ತಾವಿಸಿದರು. ಅಲ್ಲದೆ ದೇಶದ ಜನರಿಗೆ ಕೃಷ್ಣ ಜನ್ಮಾಷ್ಠಮಿಯ ಶುಭಾಶಯಗಳನ್ನು ನರೇಂದ್ರ ಮೋದಿ ಕೋರಿದರು.
ಈ ವರ್ಷ ನಾವು ಒಲಿಂಪಿಕ್ಸ್ ಹಾಕಿಯಲ್ಲಿ 40 ವರ್ಷಗಳ ಬಳಿಕ ಪದಕ ಜಯಿಸಿದೆವು. ಮೇಜರ್ ಧ್ಯಾನ್‌ಚಂದ್ ಅವರಿದ್ದಿದ್ದರೆ ಇಂದು ಎಷ್ಟು ಖುಷಿಪಡುತ್ತಿದ್ದರು ಎಂದು ಊಹಿಸಬಲ್ಲಿರಾ... ನಾವು ಇಂದು ಯುವಕರಲ್ಲಿ ಕ್ರೀಡೆಯೆ ಕುರಿತ ಪ್ರೀತಿಯನ್ನು ಕಾಣುತ್ತಿದ್ದೇವೆ. ಕ್ರೀಡೆಗಳ ಮೇಲಿನ ಈ ತುಡಿತವು ಮೇಜರ್ ಧ್ಯಾನ್ ಚಂದ್ ಅವರಿಗೆ ನಾವು ಸಲ್ಲಿಸಬಹುದಾದ ದೊಡ್ಡ ಗೌರವವಾಗಿದೆ. ಈಗಿನ ವೇಗ ಕುಂಠಿತವಾಗಲು ನಾವು ಬಿಡಬಾರದು. ಹಳ್ಳಿಗಳು, ಪಟ್ಟಣಗಳು, ನಗರಗಳಲ್ಲಿ ನಮ್ಮ ಕ್ರೀಡಾ ಮೈದಾನಗಳು ತುಂಬಿರಬೇಕು. ಸರ್ವರ ಒಳಗೊಳ್ಳುವಿಕೆಯಿಂದ ಮಾತ್ರ, ದೇಶವು ಕ್ರೀಡಾ ಕ್ಷೇತ್ರದಲ್ಲಿ ಎತ್ತರಕ್ಕೇರಬಲ್ಲದು.
ಕಳೆದ ಹಲವು ವರ್ಷಗಳಿಂದ ಮಧ್ಯ ಪ್ರದೇಶದ ಇಂದೋರ್ ನಗರವು 'ಸ್ವಚ್ಛತಾ' ಶ್ರೇಯಾಂಕದಲ್ಲಿ ಮೊದಲ ಸ್ಥಾನದಲ್ಲಿದೆ. ಈಗ, ಇಂದೋರ್ ಜನರು ತಮ್ಮ ನಗರವನ್ನು 'ವಾಟರ್ ಪ್ಲಸ್ ಸಿಟಿ (ನದಿ ಮತ್ತು ಜನಮೂಲಗಳ ಸ್ವಚ್ಛತೆಗಾಗಿ ನೀಡಲಾಗುವ ಪ್ರಮಾಣಪತ್ರ ಪಡೆದ ನಗರ)' ಮಾಡಲು ನಿರ್ಧರಿಸಿದ್ದಾರೆ. 'ವಾಟರ್ ಪ್ಲಸ್' ನಗರಗಳ ಸಂಖ್ಯೆಯೊಂದಿಗೆ ಸ್ವಚ್ಛತೆ ಸುಧಾರಿಸಲಿದೆ ಎಂದು ಹೇಳಿದರು.
ಅಂತೆಯೇ ಒಲಿಂಪಿಕ್ಸ್ ಹಾಕಿಯಲ್ಲಿ ನಾವು 40 ವರ್ಷಗಳ ಬಳಿಕ ಪದಕ ಗೆದ್ದೆವು. ಮೇಜರ್ ಧ್ಯಾನ್ ಚಂದ್ ಅವರು ಇದ್ದಿದ್ದರೆ ಇಂದು ಎಷ್ಟು ಖುಪಿಪಡುತ್ತಿದ್ದರು ಎಂದು ಯಾರಾದರೂ ಊಹಿಸಬಲ್ಲಿರಾ?. ಒಲಂಪಿಕ್ಸ್‌ನಲ್ಲಿನ ಸಾಧನೆ ಬಳಿಕ ದೇಶದಲ್ಲಿ ಕ್ರೀಡಾ ಕ್ಷೇತ್ರದ ಬಗ್ಗೆ ಅಪಾರವಾದ ಚರ್ಚೆ ನಡೆಯುತ್ತಿದೆ. ಯುವಕರು ಈ ಕ್ಷೇತ್ರದತ್ತ ಹೆಚ್ಚಾಗಿ ಆಕರ್ಷಿತರಾಗುತ್ತಿದ್ದಾರೆ. ಹಳ್ಳಿ, ಪಟ್ಟಣ, ನಗರದ ಮೈದಾನಗಳು ಕ್ರೀಡಾಪಟುಗಳಿಂದ ತುಂಬಿರಬೇಕು. ಸರ್ವರ ಒಗ್ಗೂಡುವಿಕೆಯಿಂದ ಮಾತ್ರ ಕ್ರೀಡಾ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಲಿದೆ ಎಂದು ಹೇಳಿದರು.
ಕಳೆದ ಹಲವು ವರ್ಷಗಳಿಂದ ಮಧ್ಯಪ್ರದೇಶದ ಇಂಧೋರ್ ನಗರ ಸ್ವಚ್ಛತಾ ಶ್ರೇಯಾಂಕದಲ್ಲಿ ಮೊದಲ ಸ್ಥಾನದಲ್ಲಿದೆ. ನಗರದ ಜನರು ಈ ಕೈಕಟ್ಟಿ ಕುಳಿತಿಲ್ಲ. ನದಿ ಮತ್ತು ಜಲಮೂಲಗಳ ಸ್ವಚ್ಛತೆಗಾಗಿ ನೀಡಲಾಗುವ ಪ್ರಮಾಣ ಪತ್ರವನ್ನು ಪಡೆಯಲು ತೀರ್ಮಾನಿಸಿದ್ದಾರೆ. ಅದಕ್ಕಾಗಿ ಕೆಲಸಗಳನ್ನು ಮಾಡುತ್ತಿದ್ದಾರೆ. ಗುಜರಾತ್ ರಾಜ್ಯದಲ್ಲಿ ಸಂಸ್ಕೃತ ಭಾಷೆ ಉಳಿಸುವ ಕೆಲಸ ಮಾಡಲಾಗುತ್ತಿದೆ. ರೇಡಿಯೊ ಯೂನಿಟಿ 90 ಎಫ್‌ಎಂನಲ್ಲಿ ರೇಡಿಯೊ ಜಾಕಿಗಳು ಕೇಳುಗರ ಜೊತೆ ಸಂಸ್ಕೃತದಲ್ಲಿ ಮಾತನಾಡುತ್ತಾರೆ. ಇದೊಂದು ವಿಶಿಷ್ಟ ಕಾರ್ಯಕ್ರಮವಾಗಿದೆ ಎಂದು ಹೇಳಿದರು.