ಕೊಚ್ಚಿ: ಭಾರತವು ಸ್ಥಳೀಯವಾಗಿ ತಯಾರಿಸಿದ ಐ.ಎನ್.ಎಸ್. ವಿಕ್ರಾಂತ್ ನ ಪರೀಕ್ಷಾರ್ಥ ಸಂಚಾರ ಯಶಸ್ವಿಯಾಗಿ ಮುಗಿಸಿ ಕೊಚ್ಚಿಗೆ ಮರಳಿದೆ. ಹಡಗಿನ ಮೊದಲ ಪರೀಕ್ಷಾ ಹಾರಾಟವು ಅರೇಬಿಯನ್ ಸಮುದ್ರದಲ್ಲಿ ಆಗಸ್ಟ್ 4 ರಂದು ಆರಂಭವಾಯಿತು. ನೌಕಾಪಡೆ ಮತ್ತು ಕೊಚ್ಚಿ ಶಿಪ್ ಯಾರ್ಡ್ ಹಡಗಿನ ದಕ್ಷತೆಯನ್ನು ನಿರ್ಣಯಿಸುವಲ್ಲಿ ಮುಂದಾಳತ್ವ ವಹಿಸಿದವು.
ಪರೀಕ್ಷಾರ್ಥ ಸಂಚಾರ ಮುಗಿದ ತರುವಾಯ, ಮುಂದಿನ ಹಂತವು ಲಗತ್ತಿಸಲಾದ ಆಯುಧಗಳನ್ನು ಪರೀಕ್ಷಿಸುವುದು. ಮೇಕ್ ಇನ್ ಇಂಡಿಯಾ ಮೂಲಕ ಅಭಿವೃದ್ಧಿಪಡಿಸಿದ ಐಎನ್.ಎಸ್ ವಿಕ್ರಾಂತ್ ದೇಶದ ಕನಸಿನ ಯೋಜನೆಯಾಗಿದೆ. ಐಎನ್.ಎಸ್ ವಿಕ್ರಾಂತ್ ಸಂಪೂರ್ಣವಾಗಿ ಸ್ಥಳೀಯವಾಗಿ ವಿನ್ಯಾಸಗೊಳಿಸಿದ ಮತ್ತು ಅಭಿವೃದ್ಧಿಪಡಿಸಿದ ಹಡಗು.
ಕೊಚ್ಚಿನ್ ಶಿಪ್ ಯಾರ್ಡ್ ಪ್ರೈವೇಟ್ ಲಿಮಿಟೆಡ್ ಹಡಗಿನ ಹೆಚ್ಚಿನ ನಿರ್ಮಾಣವನ್ನು ಪೂರ್ಣಗೊಳಿಸಿತು. ಹಡಗು 262 ಮೀಟರ್ ಎತ್ತರ ಮತ್ತು 62 ಮೀಟರ್ ಅಗಲವಿದ್ದು ಏಕಕಾಲದಲ್ಲಿ ಹೆಲಿಕಾಪ್ಟರ್ ಮತ್ತು ಫೈಟರ್ ಜೆಟ್ ಗಳನ್ನು ಒಯ್ಯಬಲ್ಲದು. ನೌಕಾಪಡೆಯು ಮುಂದಿನ ವರ್ಷದೊಳಗೆ ಹಡಗನ್ನು ಕಾರ್ಯಗತಗೊಳಿಸಲು ಆಶಿಸಿದೆ.