HEALTH TIPS

ಕೇರಳ ತುಳುಭವನದಲ್ಲಿ ಸಂಪನ್ನಗೊಂಡ "ಆಟಿದ ಒರ್ಮೆ"

            ಮಂಜೇಶ್ವರ: ವೈವಿಧ್ಯಮಯ ಆಚಾರಗಳಿಂದ ಸಂಪನ್ನವಾದ ತುಳುನಾಡು ಸಾಂಸ್ಕøತಿಕ, ಸಾಮಾಜಿಕ ಕ್ಷೇತ್ರಗಳಿಗೆ ನೀಡಿರುವ ಕೊಡುಗೆ ಮಹತ್ತರವಾದುದು ಎಂದು ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಆರ್.ಜಯಾನಂದ ಅಭಿಪ್ರಾಯಪಟ್ಟರು. 

         ಕೇರಳ ತುಳು ಅಕಾಡೆಮಿ ವತಿಯಿಂದ ಕೇರಳ ತುಳುಭವನದಲ್ಲಿ ಜರುಗಿದ "ಆಟಿದ ಒರ್ಮೆ" ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.  

     ಮೊದಲ ಸ್ವಾತಂತ್ರ್ಯ ಹೋರಾಟ ಮತ್ತು ಮೊದಲ ಸಾಮೂಹಿಕ ಭೋಜನ ನಡೆಸಿದ ಮಹಿನೀಯರು ತುಳುನಾಡಿನ ಇತಿಹಾಸದಲ್ಲಿ ಮೇಲ್ಪಂಕ್ತಿ ಪಡೆದಿದ್ದಾರೆ. ಹಲು ಭಾಷೆ, ಧರ್ಮ ಸಂಗಮಭೂಮಿಯಾಗಿರುವ ಇಲ್ಲಿನ ಸಾಂಸ್ಕøತಿಕ ಮೌಲ್ಯಗಳನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ಕೆಲಸವನ್ನು ಕೇರಳ ತುಳು ಅಕಾಡೆಮಿ ನಡೆಸುತ್ತಾ ಬಮದಿರುವ ಶ್ಲಾಘನೀಯ ಎಂದವರು ತಿಳಿಸಿದರು. 

        ಹಿರಿಯ ರಂಗಕರ್ಮಿ, ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್ ಎಂ.ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಮಾತನಾಡಿದ ಅವರು ತುಳು ಸಂಸ್ಕೃತಿ ವಿಶ್ವಕ್ಕೇ ಮಾದರಿಯಾದುದು. ಹಿಂದಿನ ಕಾಲದಲ್ಲಿ ಆಟಿ ತಿಂಗಳು ಬಡತನ, ರೋಗ ರುಜಿನಗಳು ತಿಂಗಳು ಎಂಬ ಭಾವನೆಗೆ ಕಾರಣವಾಗಿತ್ತು. ನಮ್ಮ ಹಿರಿಯರು ಈ ತಿಂಗಳು ಸಂಕಷ್ಟ ಅನುಭವಿಸುತ್ತಿದ್ದರು. ಇಂದು ಕೊರೋನಾದ ಕಾರಣ ನಾವು ದುಸ್ತರ ಬದುಕು ಸಾಗಿಸುತ್ತಿದ್ದೇವೆ. ಇದೇ ವೇಳೆ ಇತರೆಡೆಗಳಿಗೆ ಹೋಲಿಸಿದರೆ ತುಳುನಾಡಿನಲ್ಲಿ ಕೊರೋನಾ ಹತೋಟಿಯಲ್ಲಿದೆ. ಇದಕ್ಕೆ ಕಾರಣ ಇಲ್ಲಿನ ಪ್ರಕೃತಿ, ಕೃಷಿ, ಆಚರಣೆಗಳು ಎಂದವರು ನುಡಿದರು. 

         ಕೇರಳ ಪಾರ್ತಿಸುಬ್ಬ ಯಕ್ಷಗಾನ ಕಲಾಕ್ಷೇತ್ರದ ಕಾರ್ಯದರ್ಶಿ ಡಿ.ಬೂಬ ಅವರು ಮಾತನಾಡಿ ಪರಂಪರೆಗೆ ಮರುಮೌಲೀಕರಣ ಕಲ್ಪಿಸುತ್ತಿರುವ ಕೇರಳ ತುಳು ಅಕಾಡೆಮಿಯು ತುಳುನಾಡಿನ ಸಮಸ್ಕೃತಿಯ ಬಗ್ಗೆ ಅರಿವು ಮೂಡಿಸುತ್ತಿರುವ ಕಾಯಕ ಅಭಿಮಾನ ಮೂಡಿಸುವಂಥಾದ್ದು ಎಂದರು. 

       ಆಟಿಯ ಮಹತ್ವದ ಬಗ್ಗೆ ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಡಾ.ಆಶಾಲತಾ ಚೇವಾರ್ ಉಪನ್ಯಾಸ ನೀಡಿದರು. ಈ ವೇಳೆ ಅವರು ಮಾತನಾಡಿ ಆಚರಣೆ, ನಂಬುಗೆಯ ಮೂಲಕ ಬದುಕು ಕಟ್ಟುತ್ತಿದ್ದ ನಮ್ಮ ಹಿರಿಯರು ಎಲ್ಲವನ್ನೂ ವೈಜ್ಞಾನಿಕ ನೆಲೆಗಳಿಂದ ಕಂಡುಕೊಂಡವರು. ಸಾಂಸ್ಕೃತಿಕವಾಗಿ ಅವರು ಶ್ರೀಮಂತ ಬದುಕನ್ನು ನಡೆಸಿದ್ದರು ಎಂದರು.   

     ಅಕಾಡೆಮಿ ಸದಸ್ಯರಾದ ರಾಧಾಕೃಷ್ಣ ಉಳಿಯತ್ತಡ್ಕ, ವಿಶ್ವನಾಥ ಕುದುರು, ಸಾಹಿತಿ ಸತೀಶ್ ಸಾಲ್ಯಾನ್ ನೆಲ್ಲಿಕುಂಜೆ ಮೊದಲಾದವರು ಉಪಸ್ಥಿತರಿದ್ದರು. ಸದಸ್ಯೆ ಗೀತಾ ಸಾಮಾನಿ ಸ್ವಾಗತಿಸಿದರು. ಸದಸ್ಯ ಬಾಲಕೃಷ್ಣ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಪ್ರದೀಪ್ ಕುಮಾರ್ ವಂದಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries