ಕಾಸರಗೋಡು: ವ್ಯಾಪಿಸುತ್ತಿರುವ ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲೆ ಸೇರಿದಂತೆ ಕೇರಳಾದ್ಯಂತ ಇಂದಿನಿಂದ ರಾತ್ರಿ ವೇಳೆ ಕಫ್ರ್ಯೂ ಜಾರಿಗೊಳ್ಳಲಿದ್ದು, ನಿತ್ಯ ಸಂಚರಿಸುವವರಿಗೆ ಈ ನಿಯಂತ್ರಣದಿಂದ ಕೆಲವೊಂದು ವಿನಾಯಿತಿ ಕಲ್ಪಿಸಲಾಗಿದೆ. ರಾತ್ರಿ 10ರಿಂದ ಬೆಳಗ್ಗೆ 10ರ ವರೆಗೆ ಕಫ್ರ್ಯೂ ಜಾರಿಯಲ್ಲಿರಲಿದ್ದು, ಆಸ್ಪತ್ರೆ ತೆರಳುವವರು, ಸರಕು ಸಾಗಾಟ ವಾಹನಗಳು, ಸಮೀಪ ಸಂಬಂಧಿಕರ ಸಾವಿಗೆ ತೆರಳುವವರು, ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ ತೆರಳುವವರು ದಾಖಲೆ ತೋರಿಸಿದಲ್ಲಿ ವಿನಾಯಿತಿ ಲಭಿಸಲಿದೆ. ಇದರ ಹೊರತಾಗಿ ಪ್ರತಿದಿನ ರಾತ್ರಿ ಸಂಚರಿಸುವವರು ಸನಿಹದ ಪೊಲೀಸ್ ಠಾಣೆಯಿಂದ ಅನುಮತಿ ಪಡೆದಿರುವಂತೆಯೂ ಸೂಚಿಸಲಾಗಿದೆ.