HEALTH TIPS

'ರಾಜಕೀಯವು ಕೃತಜ್ಞತೆಯಿಲ್ಲದ ಕೆಲಸ, ಹೊಸ ಪೀಳಿಗೆಗೆ ದಾರಿ ಮಾಡಿಕೊಡಬೇಕು: ಜಿ. ಸುಧಾಕರನ್

                 

             ತಿರುವನಂತಪುರ: ಪಕ್ಷದಿಂದ ನೇರ ತನಿಖೆ ಎದುರಿಸಲಿರುವ, ಜಿ.ಸುಧಾಕರನ್ ಅವರು ಇದೀಗ ಸಾರ್ವಜನಿಕವಾಗಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಅವರು ಕಲಾಕೌಮುದಿಯ ಸಾಪ್ತಾಹಿಕ ಆವೃತ್ತಿಯಲ್ಲಿ ಬರೆದ ಕವಿತೆಯ ಮೂಲಕ ಪ್ರತಿಭಟಿಸಿರುವರು. ಕವಿತೆಯನ್ನು ಲಾಭ ಮತ್ತು ಅದೃಷ್ಟದ ಶೀರ್ಷಿಕೆಯಡಿಯಲ್ಲಿ ಬರೆಯಲಾಗಿದೆ. ಸುಧಾಕರನ್ ಅವರು ಹೊಸಬರಿಗೆ ದಾರಿ ಮಾಡಿಕೊಡುತ್ತಿದ್ದಾರೆ ಮತ್ತು ಅವರು ಮಾಡಿರುವುದು ಯಾವುದೇ ರೀತಿಯಲ್ಲೂ ಕೃತಜ್ಞತೆಯಿಲ್ಲದ ಕೆಲಸವಲ್ಲ ಎಂದು ಹೇಳುತ್ತಾರೆ.

               ಯುವಕರು ಈ ಹಾದಿಯಲ್ಲಿ ನಡೆಯಬೇಕು ಎಂದು ಹೇಳುವ ಮೂಲಕ ಕವಿತೆ ಕೊನೆಗೊಳ್ಳುತ್ತದೆ. ಮೊದಲ ಮೂರು ಪ್ಯಾರಾಗಳು ನೀರು ಮತ್ತು ಗೊಬ್ಬರದೊಳಗೆ ಮೊಳಕೆಯೊಡೆದ ಕವಿತೆಯನ್ನು ಪೆÇೀಷಿಸಲು ಸಾಧ್ಯವಾಗದ ನೋವನ್ನು ಹೇಳುತ್ತವೆ. ನಾಲ್ಕನೇ ಪ್ಯಾರಾ ತನ್ನ ವಿರುದ್ಧದ ವಿಚಾರಣೆಗೆ ಪರೋಕ್ಷ ಉತ್ತರವನ್ನು ನೀಡುತ್ತದೆ.

                 'ನಾನು ಯಾವುದೇ ರೀತಿಯಲ್ಲಿ ಕೃತಜ್ಷತೆ ಇಲ್ಲದೆ ಕೆಲಸಗಳನ್ನು ಮಾಡಿದವನಲ್ಲ. ಅದೇನೆಂದು ಹೇಳಿದರೆ  ನನ್ನ ಅದ್ಭುತ ಜೀವನವು ಸಾಮಾಜಿಕವಾಗಿದೆ ಎಂದು ನಾನು ಹೇಳುತ್ತೇನೆ. ಅದ್ಭುತ ಕ್ಷಣಗಳಲ್ಲಿ, ಅದ್ಭುತವಾದ ಕನಸುಗಳು ಮಾಯವಾಗುತ್ತವೆ ಮತ್ತು ಅವು ಯಾವುದೂ ಹೊಸ ರೂಪದಲ್ಲಿ  ಮರಳಿ ಬರುವುದಿಲ್ಲ! 'ಎಂದು ಸುಧಾಕರನ್ ಹೇಳಿದರು.

                  ಏತನ್ಮಧ್ಯೆ, ಕವಿತೆ ಭಾರೀ ಚರ್ಚೆಗೊಳಗಾದ ಬಳಿಕ ಸುಧಾಕರನ್ ಪ್ರತಿಕ್ರಿಯೆ ನೀಡಿದ್ದು,  ಕವಿತೆಯನ್ನು ತಿರುಚಲಾಗಿದೆ ಎಂದು ಹೇಳಿದರು. ಇದು ಹೊಸ ಪೀಳಿಗೆಯನ್ನು ಆಹ್ವಾನಿಸುವ ಕವಿತೆ. ಮತ್ತು ಆ ತಪ್ಪು ವ್ಯಾಖ್ಯಾನಗಳು ಅಪ್ರಸ್ತುತ. ಕವಿತೆಯು ಹೊಸಬರಿಗಾಗಿ ಎಂದು ಸುಧಾಕರನ್ ಹೇಳಿದರು.

                     ಅಂಬಲಪುಳ ಚುನಾವಣಾ ಪ್ರಚಾರ ಕಳಪೆಯಾಗಿತ್ತು ಎಂಬ ಬಗ್ಗೆ ಜಿ.ಸುಧಾಕರನ್ ಅವರನ್ನು ಸಿಪಿಎಂ ಪಕ್ಷ ತನಿಖೆ ನಡೆಸುತ್ತಿದೆ. ಚುನಾವಣಾ ಪ್ರಚಾರದ ಸಮಯದಲ್ಲಿ ಕ್ಷೇತ್ರದ ಉಸ್ತುವಾರಿ ಹೊತ್ತಿದ್ದ ಸುಧಾಕರನ್ ವಿಫಲರಾಗಿದ್ದಾರೆ ಎಂದು ತನಿಖೆ ಆರೋಪಿಸಿತ್ತು. ಸಿಪಿಎಂ ರಾಜ್ಯ ಸಮಿತಿಯಲ್ಲೂ ಸುಧಾಕರನ್ ಅವರನ್ನು ಟೀಕಿಸಲಾಗಿದೆ. ಪಕ್ಷದ ರಾಜ್ಯ ಸಮಿತಿಯು ಅಂಬಲಪುಳದಲ್ಲಿ ಪ್ರಚಾರ ವಿಫಲವಾಗಿದೆ ಎಂದು ಈಗಾಗಲೇ ಕಂಡುಕೊಂಡಿದೆ. 

                ಅಂಬಲಪುಳದಲ್ಲಿ ಪ್ರಚಾರದ ಸಮಯದಲ್ಲಿ, ಮಾಜಿ ಶಾಸಕ ಮತ್ತು ಮಾಜಿ ಸಚಿವ ಜಿ. ಸುಧಾಕರನ್ ಅವರಿಂದ ಸಾಕಷ್ಟು ಬೆಂಬಲ ಸಿಗಲಿಲ್ಲ ಎಂದು ಅಭ್ಯರ್ಥಿ ಎಚ್ ಸಲಾಂ ದೂರಿದ್ದರು. ಕೆಲವು ಕೇಂದ್ರಗಳಲ್ಲಿ ಅವರು ಎಸ್‍ಡಿಪಿಐ ಎಂದು ಪ್ರಚಾರ ಮಾಡಲಾಗುತ್ತಿದೆ ಎಂದು ಸಲಾಂ ದೂರಿದ್ದರು. ಪೋಸ್ಟರ್ ಕಾಣಿಸಿಕೊಂಡಿದ್ದು ಹೀಗೆ. ಈ ಹಿನ್ನೆಲೆಯಲ್ಲಿ ಪಕ್ಷವು ಸುಧಾಕರನ್ ವಿರುದ್ಧ ತನಿಖೆಯನ್ನು ಘೋಷಿಸಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries