ಕಾಸರಗೋಡು: ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಸನಿಹ ಆರಂಭಗೊಂಡ ಜಿಲ್ಲಾಮಟ್ಟದ ಓಣಂ ಸಂತೆಯನ್ನು ಕಾಸರಗೋಡು ನಗರಸಭಾ ಸ್ಥಾಯೀ ಸಮಿತಿ ಅಧ್ಯಕ್ಷ ಅಬ್ಬಾಸ್ ಬೀಗಂ ಉದ್ಘಾಟಿಸಿದರು. ಸಂತೆಯಿಂದ ತರಕಾರಿ ಸೇರಿದಂತೆ ವಿವಿಧ ಸಾಮಗ್ರಿ ಖರೀದಿಸುವ ಮೂಲಕ ಓಣಂ ಸಂತೆಗೆ ಚಾಲನೆ ನೀಡಿದರು. ಡಿಪೋ ಪ್ರಬಂಧಕ ಎಂ. ಗಂಗಾಧರನ್ ಸ್ವಾಗತಿಸಿದರು. ಔಟ್ಲೆಟ್ ಇನ್‍ಚಾರ್ಜ್ ಪಿ.ಶಶಿಕುಮಾರ್ ವಂದಿಸಿದರು. ಹರೀಂದ್ರನ್ ಇರಕ್ಕೋಡನ್ ಮೊದಲ ಮಾರಾಟ ನಡೆಸಿದರು.