ನವದೆಹಲಿ: ರಾಜ್ಯಗಳು ತಮ್ಮದೇ ಆದ ಹಿಂದುಳಿದ ವರ್ಗಗಳ ಪಟ್ಟಿ(ಒಬಿಸಿ)ಯನ್ನು ಮಾಡಿಕೊಳ್ಳಲು ಅಧಿಕಾರ ನೀಡುವ ಸಾಂವಿಧಾನಿಕ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ ಸಿಕ್ಕಿದೆ.
ಪಕ್ಷಭೇದ ಮರೆತು ಧ್ವನಿಮತದ ಮೂಲಕ 385 ಸದಸ್ಯರು ಮಸೂದೆ ಪರ ಮತ ಚಲಾಯಿಸಿದರು. ಆದರೆ ವಿಪಕ್ಷ ಸದಸ್ಯರು ಕೆಲವು ತಿದ್ದುಪಡಿಗಳನ್ನು ಮಾಡುವಂತೆ ಮಂಡಿಸಿದರು. ಆದರೆ ಸದನ ಇದನ್ನು ತಿರಸ್ಕರಿಸಿತು.
ಸಾಂವಿಧಾನಿಕ ತಿದ್ದುಪಡಿ ಮಸೂದೆಗೆ ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರಕ್ಕಾಗಿ ವಿಶೇಷ ಬಹುಮತದ ಅಗತ್ಯವಿದೆ.