ತಿರುವನಂತಪುರ: ಓಣಂ ರಜಾದಿನಗಳಲ್ಲಿ ರಾಜ್ಯದಲ್ಲಿ ಕೋವಿಡ್ ಪರೀಕ್ಷೆಗಳು ಮತ್ತು ಲಸಿಕೆಗಳ ಕೊರತೆ ಕಂಡುಬಂದಿದೆ. ಪರೀಕ್ಷೆಯು ಒಂದು ಲಕ್ಷಕ್ಕಿಂತ ಕಡಿಮೆ ಇದ್ದುದರಿಂದ ಟಿ.ಪಿ.ಆರ್. ಹೆಚ್ಚಾಯಿತು ಎಂದು ತಿಳಿಯಲಾಗಿದೆ.
ತಿರುವೊಣಂ ದಿನವಾದ ಶನಿವಾರ, 30,000 ಕ್ಕಿಂತ ಕಡಿಮೆ ಜನರಿಗೆ ಲಸಿಕೆ ಹಾಕಲಾಗಿದೆ. ಆಗಸ್ಟ್ 3 ರಂದು ರಾಜ್ಯದಲ್ಲಿ 1,99,500 ತಪಾಸಣೆ ನಡೆಸಲಾಯಿತು. ಟಿಪಿಆರ್ 11.87 ಶೇ.ಇತ್ತು. ಪ್ರತಿ ದಿನದಲ್ಲಿ ಪರೀಕ್ಷೆಗಳ ಸಂಖ್ಯೆ ಕಡಿಮೆಯಾಗಿತ್ತು. ತಿರುವೊಣಂ ದಿನದ ವೇಳೆಗೆ ಕೇವಲ 96,481 ತಪಾಸಣೆಗಳು ಮಾತ್ರ ನಡೆದಿದ್ದವು. ಇದರೊಂದಿಗೆ, ಟಿಪಿಆರ್ 17.73 ಕ್ಕೆ ಏರಿತು.
ಓಣಂ ಆಚರಣೆಯ ನಂತರ ಕೋವಿಡ್ ಹರಡುವಿಕೆಯಿಂದಾಗಿ ಈ ತಿಂಗಳ ಅಂತ್ಯದ ವೇಳೆಗೆ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತವೆ ಎಂದು ಅಂದಾಜಿಸಲಾಗಿದೆ. ಆದ್ದರಿಂದ ಪರೀಕ್ಷೆಗಳನ್ನು ಹೆಚ್ಚಿಸಬೇಕು ಎಂಬ ಸಲಹೆ ನೀಡಲಾಗಿದೆ. ರಾಜ್ಯದಲ್ಲಿ ಲಸಿಕೆ ವಿತರಣೆ ಪ್ರಾರಂಭಗೊಂಡ ಬಳಿಕ ಶನಿವಾರ(ನಿನ್ನೆ) ಯಷ್ಟೇ ಅತಿದೊಡ್ಡ ಪ್ರಮಾಣದಲ್ಲಿ ಕಡಿಮೆಡ ಜನರಿಗೆ ಲಸಿಕೆ ವಿತರಿಸಲಾಗಿತ್ತು. ಈ ತಿಂಗಳ 13 ರಂದು ಐದೂವರೆ ಲಕ್ಷಕ್ಕೂ ಹೆಚ್ಚು ಜನರಿಗೆ ಲಸಿಕೆ ಹಾಕಲಾಗಿತ್ತು. ಹೊಸದಾಗಿ ಲಸಿಕೆ ಹಾಕಬೇಕಾದ ಮೊದಲ ಡೋಸ್ ಲಸಿಕೆಗಳ ಸಂಖ್ಯೆಯಲ್ಲಿ ತೀವ್ರ ಕುಸಿತ ಕಂಡುಬಂದಿದೆ.