ಬದಿಯಡ್ಕ: ಕೆಡೆಂಜಿ ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ನಡೆದುಬರುತ್ತಿರುವ ರಾಮಾಯಣ ಮಾಸಾಚರಣೆಯ ಸಮಾರೋಪ ಸಮಾರಂಭ ಆ. 16 ರಂದು ಸೋಣ ಸಂಕ್ರಮಣದಂದು ನಡೆಯಲಿರುವುದು. ತುಳು ಮಹಾಕಾವ್ಯ ಮಂದಾರ ರಾಮಾಯಣದಲ್ಲಿ ರವಿಕಾಂತ ಕೇಸರಿ ಕಡಾರು ವಾಚನ ಹಾಗೂ ಶ್ಯಾಮ ಆಳ್ವ ಕಡಾರು ಪ್ರವಚನ ನಡೆಸಿಕೊಡಲಿದ್ದಾರೆ. ಬೆಳಗ್ಗೆ 10ರಿಂದ ಮಧ್ಯಾಹ್ನ 12.15ರ ತನಕ ಕೋವಿಡ್ ಮಾನದಂಡಗಳನ್ನು ಪಾಲಿಸಿಕೊಂಡು ಕಾರ್ಯಕ್ರಮ ನಡೆಯಲಿರುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.