ತಿರುವನಂತಪುರಂ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಕೊಲೆಗೈಯ್ಯುವುದಾಗಿ ಬೆದರಿಕೆ ಹಾಕಿದ ವ್ಯಕ್ತಿಯನ್ನು ಬಂಧಿಸಲಾಗಿದೆ. ಕೊಟ್ಟಾಯಂ ಮೂಲದ ಅನಿಲ್ ಬಂಧಿತ ವ್ಯಕ್ತಿ. ಆತನನ್ನು ತ್ರಿಪುನಿತ್ತುರಾದಿಂದ ಬಂಧಿಸಲಾಯಿತು.
ಆತ ಎರ್ನಾಕುಲಂಗೆ ತೆರಳುವ ಬಸ್ಸಿನಲ್ಲಿದ್ದಾನೆ ಎಂದು ಕೊಟ್ಟಾಯಂ ಪೋಲೀಸ್ ತಂಡ ತಿಳಿಸಿದ ಬಳಿಕ ಹಿಲ್ ಪ್ಯಾಲೇಸ್ ಪೋಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ವೈಕಂ ಪೋಲೀಸರು ಆತನ ಪ್ರಾಥಮಿಕ ಹೇಳಿಕೆಯನ್ನು ಪಡೆದಿದ್ದಾರೆ. ಆರೋಪಿ ವಿರೋಧಾತ್ಮಕ ವಿಷಯಗಳನ್ನು ಹೇಳುತ್ತಿದ್ದಾನೆ ಮತ್ತು ವಿವರವಾದ ತನಿಖೆ ನಡೆಸಲಾಗುವುದು ಎಂದು ತನಿಖಾ ತಂಡ ಹೇಳಿದೆ.
ಪೋಲೀಸರ ಕಿರುಕುಳದ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಮುಖ್ಯಮಂತ್ರಿಯನ್ನು ಕೊಲೆಗೈಯ್ಯುವುದಾಗಿ ಕರೆಮಾಡಿ ಬೆದರಿಕೆ ಹಾಕಿದ್ದ. ಬೆದರಿಕೆ ಕ್ಲಿಫ್ ಹೌಸ್‍ಗೆ ಕರೆ ಮಾಡಿ ಈ ಬೆದರಿಕೆ ಕರೆ ಮಾಡಲಾಗಿತ್ತು.