ವಿಧಾನಸಭೆಯಲ್ಲಿ ಪ್ರತಿಧ್ವನಿಗೊಂಡ ಕರ್ನಾಟಕ- ಕೇರಳ ಕೋವಿಡ್ ಗಡಿ ವಿವಾದ : ಶಾಸಕರ ಮನವಿಗೆ ಮುಖ್ಯಮಂತ್ರಿಯಿಂದ ಭರವಸೆ
0
ಆಗಸ್ಟ್ 05, 2021
ತಿರುವನಂತಪುರ : ಕಳೆದ ಕೆಲವು ದಿವಸಗಳಿಂದ ಕರ್ನಾಟಕ ಸರ್ಕಾರ ಕೇರಳ ಗಡಿ ಭಾಗಗಳಲ್ಲಿ ಕಠಿಣವಾದ ನಿಯಂತ್ರಣಗಳನ್ನು ಹೇರುತ್ತಿದ್ದು ಇದರಿಂದಾಗಿ ವಿದ್ಯಾರ್ಥಿಗಳು, ರೋಗಿಗಳು ಸೇರಿದಂತೆ ದಿನನಿತ್ಯ ಹೊಟ್ಟೆಪಾಡಿಗಾಗಿ ಮಂಗಳೂರನ್ನು ಆಶ್ರಯಿಸುತ್ತಿರುವ ಸಹಸ್ರಾರು ಮಂದಿ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಕರ್ನಾಟಕದಲ್ಲಿ ಕೋವಿಡ್ ರೋಗಿಗಳ ಹೆಚ್ಚಳವಾಗುತ್ತಿರುವುದು ಅಲ್ಲಿಯ ಜನತೆ ಕೋವಿಡ್ ಮಾನದಂಡಗಳನ್ನು ಉಲ್ಲಂಘಿಸುವುದರಿಂದ ಹೊರತು ಕೇರಳದಿಂದ ಸಾಗುವ ಜನತೆಯಿಂದಲ್ಲ. ಕೋವಿಡ್ ಹೆಸರಲ್ಲಿ ಕೇರಳದ ಜನತೆಯನ್ನು ತಡೆಗಟ್ಟುತ್ತಿರುವ ಕರ್ನಾಟಕ ನಿಲುವಿನ ವಿರುದ್ಧ ಮುಖ್ಯಮಂತ್ರಿಯವರು ಮಧ್ಯಪ್ರವೇಶಿಸಬೇಕಾಗಿದೆ ಎಂಬುದಾಗಿ ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ವಿಧಾನಸಭೆಯಲ್ಲಿ ಧ್ವನಿ ಎತ್ತಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಲಪಾಡಿ ಗಡಿಯಲ್ಲಿ ಕರ್ನಾಟಕ ಸರಕಾರ ಆರ್ ಟಿ ಪಿಸಿಆರ್ ಕಡ್ಡಾಯಗೊಳಿಸಿರುವ ಹಿನ್ನೆಲೆಯಲ್ಲಿ ಸರಕಾರದ ವತಿಯಿಂದ ತಪಾಸಣೆಗೆ ಬೇಕಾಗಿರುವ ಎಲ್ಲಾ ಸೌಕರ್ಯಗಳನ್ನು ಈಗಾಗಲೇ ಸ್ಥಾಪಿಸಲಾಗಿದೆ. ಮಾತ್ರವಲ್ಲದೆ ಕೋವಿಡ್ ತಪಾಸಣೆ ಹೆಸರಲ್ಲಿ ಅಂತಾರಾಜ್ಯ ಗಡಿಯಲ್ಲಿ ವಾಹನ ಸಂಚಾರಕ್ಕೆ ನಿಷೇಧ ಹೇರುತ್ತಿರುವುದು ಕೇಂದ್ರದ ತೀರ್ಮಾನಕ್ಕೆ ವಿರುದ್ಧವಾಗಿದೆ. ಈಗಾಗಲೇ ಕೇರಳ ಪೊಲೀಸ್ ವರಿಷ್ಠರು ಕರ್ನಾಟಕ ಪೊಲೀಸ್ ವರಿಷ್ಠರೊಂದಿಗೆ ಮಾತುಕತೆ ನಡೆಸಿರುವುದಾಗಿ ಅವರು ಶಾಸಕರಿಗೆ ಪ್ರತಿಕ್ರಿಯಿಸಿದ್ದಾರೆ.
Tags