ಮುಳ್ಳೇರಿಯ: ಬೆಳ್ಳೂರು ಗ್ರಾಮ ಪಂಚಾಯತಿ 10 ನೇ ವಾರ್ಡಿನ ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ನಿರ್ಮಿಸಿದ ನಾಟೆಕಲ್ಲು- ಜಾಲಮೂಲೆ ರಸ್ತೆ ಉದ್ಘಾಟನೆಯನ್ನು ಬೆಳ್ಳೂರು ಪಂಚಾಯತಿ ಅಧ್ಯಕ್ಷ ಶ್ರೀಧರ. ಎಂ ಇವರು ನೆರವೇರಿಸಿದರು. 10 ನೇ ವಾರ್ಡಿನ ಜನಪ್ರತಿನಿಧಿಯೂ ಅರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿ ಅಧ್ಯಕ್ಷರಾದ ಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಗೀತಾ. ಕೆ, ಕಾರ್ಯದರ್ಶಿ ಎ.ಎಲ್ ಥೋಮಸ್, ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಜಾತಾ ಎಂ ರೈ, ಬ್ಲಾಕ್ ಪಂಚಾಯತಿ ಸದಸ್ಯೆ ಯಶೋದಾ, ಪಂಚಾಯತಿ ಸದಸ್ಯರಾದ ಗೀತಾ. ಬಿ. ಎನ್, ಭಾಗೀರಥಿ.ಆರ್ .ರೈ, ಪಂಚಾಯತಿ ವಿ.ಇ.ಓ ಅನೀಶ್, ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಎ ಇ ಶಿಲ್ಪಾ, ಮಂಜುನಾಥ್, ಇವರುಗಳು ಶುಭಾಸಂಶನೆ ಗೈದರು. ಈ ಕಾರ್ಯಕ್ರಮವನ್ನು ಸುಗಮವಾಗಿ ಮಾಡಿದ ಕರ್ತೃ ಕೃಷ್ಣ ಮಣಿಯಾಣಿ ಮರಾಯಿಗುಡ್ಡೆ ಇವರಿಗೆ ಈ ಸಂದರ್ಭದಲ್ಲಿ ಸನ್ಮಾನ ಮಾಡಲಾಯಿತು. ಪ್ರತ್ಯೇಕ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವ ಮೂಲಕ ಕಾರ್ಯಕ್ರಮ ನೆರವೇರಿತುಚಂದ್ರಶೇಖರ ಆಚಾರ್ಯ ನಾಟೆಕಲ್ಲು ಪ್ರಾರ್ಥನೆಯೊಂದಿಗೆ ಸ್ವಾಗತಿಸಿ ದಾಮೋದರ ಮಾಸ್ತರ್ ವಂದಿಸಿದರು. . ಸುಂದರ ರಾಜ್ ರೈ ಬೆಳ್ಳೂರು ಕಾರ್ಯಕ್ರಮ ನಿರೂಪಿಸಿದರು.