ಉಪ್ಪಳ: ಅತೀ ಪುರಾತನ, ಪ್ರಸಿದ್ದ ಮಂಗಲ್ಪಾಡಿ ಪ್ರತಾಪನಗರದ ಸೋಂಕಾಲು ದಾರು ವನದ ದೈವದ ಕಲ್ಲಿನ ಮೇಲೆ ಹಾಗೂ ಪರಿಸರದಲ್ಲಿ ಪ್ರಾಣಿಗಳ ಕರುಳುಗಳು ಕಂಡುಬಂದಿದೆ. ಶುಕ್ರವಾರ ಬೆಳಿಗ್ಗೆ ಅರ್ಚನೆಗೆ ತಲಪಿದ ಭಕ್ತರಿಗೆ ಭಾರೀ ದುರ್ವಾಸನೆ ಬೀರುತ್ತಿರುವ ಪ್ರಾಣಿಗಳ ಕರುಳುಗಳು ದೈವದ ಕಲ್ಲಿನ ಮೇಲೆ ಇರಿಸಿಟ್ಟ ಸ್ಥಿತಿಯಲ್ಲಿ ಕಂಡುಬಂದಿತು. ವಿಷಯ ತಿಳಿದು ಸೇರಿದ ಜನರು ಘಟನೆಯನ್ನು ಕುಂಬಳೆ ಪೋಲೀಸರಿಗೆ ತಿಳಿಸಿದರು. ಸ್ಥಳಕ್ಕೆ ತಲಪಿದ ಕುಂಬಳೆ ಠಾಣೆಯ ಎಸ್.ಐ.ಗಳಾದ ಅನೀಶ್ ಹಾಗೂ ರಾಜೀವ್ ಆಗಮಿಸಿ ಪರಿಶೀಲನೆ ನಡೆಸಿದರು. ಬಳಿಕ ಅವುಗಳನ್ನು ತೆರವುಗೊಳಿಸಿ ಶುಚೀಕರಿಸಲಾಯಿತು.
ಘಟನೆಯ ಕುರಿತು ಸಮಗ್ರ ತನಿಖೆ ನಡೆಸುವುದಾಗಿ ಎಸ್.ಐ.ಅನೀಶ್ ತಿಳಿಸಿರುವರು. ಕಿಡಿಗೇಡಿಗಳ ಈ ಕೃತ್ಯ ಊರವರಲ್ಲಿ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದೆ.