ತಿರುವನಂತಪುರ: ಕೋವಿಡ್ ನಿಯಂತ್ರಣಗಳಲ್ಲಿ ರಿಯಾಯಿತಿಗಳನ್ನು ನೀಡಲಾಗಿದ್ದರೂ, ಬಿಕ್ಕಟ್ಟು ಮುಂದುವರಿದಿದೆ. ವ್ಯಾಪಾರ ಕೇಂದ್ರ, ಅಂಗಡಿ-ಮುಗ್ಗಟ್ಟುಗಳಿಗೆ ಆಗಮಿಸುವ ಗ್ರಾಹಕರಿಗೆ ಕಠಿಣ ನಿಮಯಮಗಳನ್ನು ಸರ್ಕಾರ ವಿಧಿಸಿರುವುದು ಬಿಕ್ಕಟ್ಟಿಗೆ ಕಾರಣವಾಗಿದೆ. ಇಂತಹ ನಿಬಂಧನೆಗÀಳು ಮುಂದುವರಿದರೆ, ಓಣಂ ಮಾರುಕಟ್ಟೆಯೂ ಪ್ರಯೋಜನಕಾರಿಯಾಗುವುದಿಲ್ಲ ಎಂದು ತಿಳಿಯಲಾಗಿದೆ.
ಗುರುವಾರದಿಂದ ರಾಜ್ಯಾದ್ಯಂತ ಎಲ್ಲಾ ಅಂಗಡಿಗಳು ತೆರೆದಿರುತ್ತವೆ. ಜನರು ಅಂಗಡಿಗಳಿಗೆ ತೆರಳಬಹುದು. ಇವೆಲ್ಲ ಸರ್ಕಾರದ ಘೋಷಣೆಗಳು. ಆದರೆ ರಿಯಾಯಿತಿಗಳ ಹೊರತಾಗಿಯೂ, ವ್ಯಾಪಾರಿಗಳ ಸಂಕಷ್ಟವನ್ನು ಪರಿಹರಿಸಲಾಗುತ್ತಿಲ್ಲ. ಅಂಗಡಿಗಳಿಗೆ ಪ್ರವೇಶದ ಮೇಲಿನ ನಿಬರ್ಂಧಗಳಿಂದಾಗಿ ಹಿನ್ನಡೆಯಾಗಿದೆ. ಮಳಿಗೆಗಳಿಗೆ ತೆರಳುವ ಗ್ರಾಹಕರು ಕೊರೋನಾ ಲಸಿಕೆ ಪಡೆದ ಗುರುತುಪತ್ರ ಅ|ಥವಾ ಆರ್‍ಟಿಪಿಸಿಆರ್ ಋಣಾತ್ಮಕ ಸರ್ಟಿಫಿಕೇಟ್ ಹೊಂದಿರಬೇಕು ಎಂದು ಆದೇಶಿಸಿರುವುದು ಭಾರೀ ಟೀಕೆಗೆ ಕಾರಣವಾಗಿದೆ. ಲಸಿಕೆ ಪಡೆದವರಲ್ಲಿ ಹೆಚ್ಚಿನವರು 60 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಇವರು ಪೇಟೆಗಳಿಗೆ ತೆರಳುವವರಲ್ಲ. ಇತರರು ಪ್ರತಿ ಮೂರು ದಿನಗಳಿಗೊಮ್ಮೆ ಕೋವಿಡ್ ಪರೀಕ್ಷೆಗೆ ಒಳಗಾಗಬೇಕು. ಇದು ಪ್ರಾಯೋಗಿಕವಾಗಿ ಅಸಾಧ್ಯ. ಸರ್ಕಾರದ ಇಂತಹ ಆದೇಶವು ಆನ್‍ಲೈನ್ ವ್ಯಾಪಾರಿಗಳನ್ನು ರಕ್ಷಿಸುವ ತಂತ್ರ ಎಂದು ವ್ಯಾಪಾರಿಗಳು ಆರೋಪಿಸಿದ್ದಾರೆ.
ಓಣಂ ಮಾರುಕಟ್ಟೆಗೆ ಅಂಗಡಿಗಳು ತೆರೆದಿದ್ದರೂ, ನಿಬಂಧನೆsÀಗಳು ಮುಂದುವರಿದರೆ, ವ್ಯಾಪಾರ ವ್ಯವಹಾರ ನಿಸ್ತೇಜತೆಯಲ್ಲೇ ಮುಂದುವರಿಯಲಿದೆ ಎಂದು ವ್ಯಾಪಾರಿಗಳು ಚಿಂತಿತರಾಗಿದ್ದಾರೆ. ಅಂಗಡಿಗಳಲ್ಲಿ ಜನದಟ್ಟಣೆಗೆ ಸರ್ಕಾರ ದಂಡ ವಿಧಿಸಲು ಮುಂದಾಗಿದೆ. ವ್ಯಾಪಾರಿಗಳಿಗೆ ಸಹಾಯ ಮಾಡುವ ಹೆಸರಿನಲ್ಲಿ ವಾಸ್ತವವಾಗಿ ಜಾರಿಗೆ ತಂದ ರಿಯಾಯಿತಿಗಳು ತಮಗೆ ತೊಂದರೆ ಉಂಟುಮಾಡುತ್ತಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.