ಕಾಸರಗೋಡು: ಎಲ್ಲ ಸಾಲಗಳ ಬಡ್ಡಿ ಮನ್ನಾಮಾಡಬೇಕು, ಭತ್ತ, ಹಸಿ ತೆಂಗು, ತರಕಾರಿ ಖರೀದಿ ಮೊತ್ತವನ್ನು ನಗದಾಗಿ ನೀಡಬೇಕು, ಹಸಿ ತೆಂಗಿನ ಬೆಲೆ ಕಿಲೋ ಒಂದಕ್ಕೆ 40ರೂ. ನಿಡಬೇಕು, ಸಾಮಾಜಿಕ ಕ್ಷೇಮ ಮಾಸಿಕ ಪಿಂಚಣಿ 5ಸಾವಿರ ನೀಡಬೇಕು ಮುಂತಾದ ಬೇಡಿಕೆ ಮುಂದಿರಿಸಿ ಕೇರಳ ಪ್ರದೇಶ ಕೃಷಿಕ ಕಾಂಗ್ರೆಸ್ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ವಠಾರದಲ್ಲಿ 'ಕಣ್ಣೀರ ದಿನ' ಪ್ರತಿಭಟನೆ ನಡೆಸಲಾಯಿತು.
ಡಿಸಿಸಿ ಅಧ್ಯಕ್ಷ ಹಾಕಿಂ ಕುನ್ನಿಲ್ ಉದ್ಘಾಟಿಸಿದರು. ಕೃಷಿಕ ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ರಾಜು ಕಟ್ಟಕಯಂ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಉಮೇಶ್ ಬೇಲೂರ್, ಎಂ.ಬಿ ಜೋಸೆಫ್, ಸಾಬು ಬಡ್ಡಡ್ಕ, ಕುಞÂಕೃಷ್ಣನ್ ನಾಯರ್, ಅಶೋಕ್ ಹೆಗ್ಡೆ, ಶೋಬಿ ಜೋಸೆಫ್ ಉಪಸ್ಥಿತರಿದ್ದರು. ಟಿಟೋ ಜೋಸೆಫ್ ಸ್ವಾಗತಿಸಿದರು. ಕೆ. ಮಾಧವನ್ ನಾಯರ್ ವಂದಿಸಿದರು.