ಕಾಸರಗೋಡು: ಕೋವಿಡ್ ನಿಯಂತ್ರಿಸಲು ಹೆಣಗಾಡುತ್ತಿರುವ ಕೇರಳ ಸರ್ಕಾರ, ಭಾನುವಾರದಂದು ವಾರಾಂತ್ಯ ಸಂಪೂರ್ಣ ಲಾಕ್‍ಡೌನ್ ನಡೆಸಲು ತೀರ್ಮಾನಿಸಿದೆ. ಟ್ರಿಪಲ್ ಲಾಕ್‍ಡೌನ್‍ಗೆ ಸಮಾನವಾಗಿ ಭಾನುವಾರದ ನಿಯಂತ್ರಣಗಳಿರುವುದಾಗಿ ಸರ್ಕಾರ ತಿಳಿಸಿದೆ. ಅಗತ್ಯ ಸಾಮಗ್ರಿ ಮಾರಾಟದಂಗಡಿಗಳು ತೆರೆದು ಕಾರ್ಯಾಚರಿಸಲಿದ್ದು, ತುರ್ತು ಪ್ರಯಾಣಕ್ಕೆ ಮಾತ್ರ ವಾಹನ ಸಂಚಾರಕ್ಕೆ ಅನುಮತಿ ನೀಡಲಾಗಿದೆ.
ಈ ಹಿಂದೆ ಶನಿವಾರ ಮತ್ತು ಭಾನುವಾರದಂದು ವಾರಾಂತ್ಯ ಸಂಪೂರ್ಣ ಲಾಕ್‍ಡೌನ್ ಜಾರಿಗೊಳಿಸಿದ್ದರೂ, ನಂತರ ಶನಿವಾರ ಲಾಕ್‍ಡೌನ್ ಕೈಬಿಡಲಾಗಿದೆ. ಈ ಮಧ್ಯೆ ಬಕ್ರಿದ್, ಓಣಂ ಹಬ್ಬದ ಹಿನ್ನೆಲೆಯಲ್ಲಿ ಕಳೆದ ಎರಡು ಭಾನುವಾರದಂದೂ ಲಾಕ್‍ಡೌನ್ ಜಾರಿಗೊಳಿಸಿರಲಿಲ್ಲ.