ವಯನಾಡ್: ತೊಂಡರ್ನಾಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಪೆರಿಂಚೆರ್ಮಲ ಬುಡಕಟ್ಟು ಕಾಲನಿಯ ನಿವಾಸಿಗಳು ನಾಲ್ಕು ಮಂದಿ ಸದಸ್ಯರಿದ್ದ ಸಶಸ್ತ್ರ ನಕ್ಸಲ್ ಗುಂಪೊಂದು ಕಾಲನಿಗೆ ಭೇಟಿ ನೀಡಿರುವುದಾಗಿ ತಿಳಿಸಿದ್ದಾರೆ. ಭಾನುವಾರ ರಾತ್ರಿ 8 ರ ಸುಮಾರಿಗೆ ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷರಿದ್ದ ಗುಂಪು ಭೇಟಿ ನೀಡಿದೆ ಎಂದು ಕಾಲನಿ ನಿವಾಸಿಗಳು ತಿಳಿಸಿದ್ದಾರೆ.
ನಕ್ಸಲ್ ತಂಡ ಕಾಲನಿಯ 2 ಮನೆಗಳಿಗೆ ನುಗ್ಗಿ ಘೋಷಣೆಗಳನ್ನು ಕೂಗಿದರು ಮತ್ತು ಕರಪತ್ರಗಳನ್ನು ನೀಡಿದರು. ಈ ಪ್ರದೇಶದಲ್ಲಿ ವಿದ್ಯುತ್ ಪೋಸ್ಟ್‌ಗಳ ಮೇಲೆ ಪೋಸ್ಟರ್‌ಗಳನ್ನು ಹಾಕಿದ ನಂತರ ಗುಂಪು ಅರಣ್ಯದೊಳಗೆ ಮರೆಯಾಯಿತು ಎಂದು ತಿಳಿದುಬಂದಿದೆ. ಪೋಸ್ಟರ್‌ಗಳಲ್ಲಿ ಜುಲೈ 28, ಆಗಸ್ಟ್ 3 ಹುತಾತ್ಮರ ವಾರಾಚರಣೆ ಮತ್ತು ಸರ್ಕಾರಕ್ಕೆ ಕಠಿಣ ಸಂದೇಶಘಳ ವಿವರಣೆಗಳನ್ನು ಬರೆಯಲಾಗಿದೆ.
‘ಶ್ರೀ ಪಿಣರಾಯಿ ವಿಜಯನ್ ಕೇರಳದಲ್ಲಿ ನೀವು ಕಂಡ ಅತ್ಯಂತ ನರಭಕ್ಷಕ ಮುಖ್ಯಮಂತ್ರಿ. ಇನ್ನು ಮುಂದೆ ನಿಮ್ಮನ್ನು ಯಾರೂ ಸಾಮಾಜಿಕ ಫ್ಯಾಸಿಸ್ಟ್ ಅಥವಾ ಕಿಡಿಗೇಡಿ ಮೋದಿ ಎಂದು ಕರೆಯುವುದಿಲ್ಲ. ನೀವು ಮಾನವ ಯಕೃತ್ತನ್ನು ಕಿತ್ತೆಗೆಯುವ ವ್ಯಕ್ತಿ. ಸಾವಿನ ವ್ಯಾಪಾರಿ 'ಎಂದು ಪೋಸ್ಟರ್‌ನಲ್ಲಿ ಬರೆಯಲಾಗಿದೆ.