HEALTH TIPS

ಕೇರಳಕ್ಕೆ ರಾಹುಲ್‌ ಭೇಟಿ; ʼರಾಜಕೀಯ ಪ್ರವಾಸೋದ್ಯಮʼ ನಡೆಯುತ್ತಿದೆ ಎಂದ ನಡ್ಡಾ

              ನವದೆಹಲಿ: ಕೇರಳದ ವಯನಾಡ್‌ಗೆ ಭೇಟಿ ನೀಡಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಟೀಕಿಸಿದ್ದಾರೆ. ಕೇರಳದಲ್ಲಿ ರಾಜಕೀಯ ಪ್ರವಾಸೋದ್ಯಮ ನಡೆಯುತ್ತಿದೆ ಎಂದು ಕಿಡಿಕಾರಿದ್ದಾರೆ.

              ನಡ್ಡಾ ಅವರು ಕೋಯಿಕ್ಕೋಡ್‌ನಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಪಕ್ಷದ ಜಿಲ್ಲಾ ಸಮಿತಿ ಕಚೇರಿಯನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು. ಇದೇ ವೇಳೆ ಮಾತನಾಡಿದ ಅವರು, ʼಕೇರಳದಲ್ಲಿ ರಾಹುಲ್‌ ಗಾಂಧಿ ಅವರ ರಾಜಕೀಯ ಪ್ರವಾಸೋದ್ಯಮ ನಡೆಯುತ್ತಿದೆ. ಅವರು (ರಾಹುಲ್)‌ ಅಮೇಥಿಯಲ್ಲಿ ಸೋಲು ಕಂಡು ವಯನಾಡ್‌ಗೆ ಓಡಿ ಹೋದರು. ರಾಜ್ಯ ಬದಲಿಸುವುದರಿಂದ ಯಾರೊಬ್ಬರ ನಡವಳಿಕೆ, ಉದ್ದೇಶಗಳು ಮತ್ತು ಜನರಿಗೆ ಸೇವೆ ಸಲ್ಲಿಸುವ ಸಮರ್ಪಣಾ ಭಾವದಲ್ಲಿ ಬದಲಾವಣೆಗಳಾಗುವುದಿಲ್ಲʼ ಎಂದು ಹೇಳಿದ್ದಾರೆ.

            ಮುಂದುವರಿದು, ʼಕೇರಳದ ಬಗ್ಗೆ ಮಾತನಾಡುವಾಗ ನನಗೆ ತುಂಬಾ ನೋವು ಮತ್ತು ದುಃಖವಾಗುತ್ತದೆ. ಪ್ರಧಾನಿ ಮೋದಿಯವರು ಎಲ್ಲರೀತಿಯ ನೆರವು ನೀಡುತ್ತಿದ್ದಾರಾದರೂ, ಅವು ಸರಿಯಾದ ರೀತಿಯಲ್ಲಿ ಕಾರ್ಯಾಚರಣೆಗೆ ಬರುತ್ತಿಲ್ಲ. ಕಳೆದ ಮೂರ್ನಾಲ್ಕು ದಶಕಗಳಿಂದ ಚಾಲ್ತಿಯಲ್ಲಿರುವ ರಾಜಕೀಯ ಸಂಸ್ಕೃತಿಯಿಂದಾಗಿ ಕೇರಳದ ಅಭಿವೃದ್ಧಿಗೆ ತೊಡಕಾಗಿದೆʼ ಎಂದು ಆರೋಪಿಸಿದ್ದಾರೆ.

            ರಾಹುಲ್‌ ಗಾಂಧಿ ಅವರು ಲೋಕಸಭೆಯಲ್ಲಿ ವಯನಾಡ್‌ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಮೂರು ದಿನಗಳ (ಆಗಸ್ಟ್ 16 ರಿಂದ 18ರ ವರೆಗೆ) ಭೇಟಿ ಸಲುವಾಗಿ ಇಲ್ಲಿಗೆ ಅಗಮಿಸಿದ್ದಾರೆ.            ಜಿಲ್ಲಾಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿರುವ ರಾಹುಲ್‌, ಕುಡಿಯುವ ನೀರಿನ ಯೋಜನೆಗಳಿಗೆ ಸೋಮವಾರ ಚಾಲನೆ ನೀಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries