ಬದಿಯಡ್ಕ: ಎಡನೀರು ಮಠದಲ್ಲಿ ನಡೆಯುತ್ತಿರುವ ಶ್ರೀಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಪ್ರಥಮ ಚಾತುರ್ಮಾಸ್ಯ ವ್ರತ ಮತ್ತು ಬ್ರಹ್ಮೈಕ್ಯ ಕೇಶವಾನಂದ ಭಾರತೀ ಶ್ರೀಪಾದಂಗಳವರ ಪ್ರಥಮ ಆರಾಧನಾ ಸ್ಮೃತಿಯ ಪ್ರಯುಕ್ತ ಪುತ್ತೂರಿನ 'ಧೀಶಕ್ತಿ ಮಹಿಳಾ ಯಕ್ಷಬಳಗ', ತಂಡದವರಿಂದ ಯಕ್ಷಗಾನ ತಾಳಮದ್ದಳೆ "ಶ್ರೀಕೃಷ್ಣ ರಾಯಭಾರ" ಇತ್ತೀಚೆಗೆ ನಡೆಯಿತು.
ಹಿಮ್ಮೇಳದಲ್ಲಿ ಕಾವ್ಯಶ್ರೀ ನಾಯಕ್, ಪಿ.ಜಿ.ಜಗನ್ನಿವಾಸ ರಾವ್, ಶ್ರೀಪತಿ ನಾಯಕ್ ಆಜೇರು, ಮತ್ತು ಮುಮ್ಮೇಳದಲ್ಲಿ ಪದ್ಮಾ ಕೆ ಆರ್ ಆಚಾರ್ಯ(ಶ್ರೀಕೃಷ್ಣ), ಜಯಲಕ್ಷ್ಮಿ ವಿ ಭಟ್ (ಕೌರವ), ಪ್ರೇಮಾ ಕಿಶೋರ್(ವಿದುರ), ವಿನಯಾ ಜಿ ಕೇಕುಣ್ಣಾಯ(ದ್ರೌಪದಿ) ಭಾಗವಹಿಸಿದ್ದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಬ್ರಹ್ಮೈಕ್ಯ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ ಸ್ಮರಣಾರ್ಥ ನಡೆದ ಕಾರ್ಯಕ್ರಮದಲ್ಲಿ ತಂಡದ ಸಂಚಾಲಕಿ ಪದ್ಮಾ ಆಚಾರ್ಯ ಅವರು ನುಡಿನಮನ ಸಲ್ಲಿಸಿದರು. ಜಯಲಕ್ಷ್ಮಿ ಭಟ್ ಸ್ವಾಗತಿಸಿದರು. ಸಚ್ಚಿದಾನಂದ ಭಾರತೀ ಸ್ವಾಮೀಜಿಯವರಿಗೆ ಪಿ.ಜಿ ಜಗನ್ನಿವಾಸ ರಾವ್ ಮತ್ತು ಶ್ರೀಪತಿ ನಾಯಕ್ ಆಜೇರು ಅವರು ಗೌರವಾರ್ಪಣೆ ಸಲ್ಲಿಸಿದದರು. ಶ್ರೀಗಳು ಆಶೀರ್ವಚನ ನುಡಿಗಳನ್ನಾಡಿದರು.
ತಾಳಮದ್ದಲೆ ಕಾರ್ಯಕ್ರಮದ ಕೊನೆಯಲ್ಲಿ ಶ್ರೀ ರವೀಶ್ ತಂತ್ರಿ ಕುಂಟಾರು ಕಾರ್ಯಕ್ರಮದ ಅವಲೋಕನದೊಂದಿಗೆ ಕಲಾವಿದರಿಗೆ ಪ್ರೋತ್ಸಾಹಕರ ನುಡಿಗಳನ್ನಾಡಿ ವಂದಿಸಿದರು.