.
ಕಾಸರಗೋಡು: ಕಳೆದ ಮೂರು ದಿನಗಳಿಂದ ಎಡನೀರಿನಲ್ಲಿ ಜರಗುತ್ತಿರುವ ಬ್ರಹ್ಮೈಕ್ಯ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರ ಆರಾಧನಾ ಮಹೋತ್ಸವವು ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಶುಕ್ರವಾರ ಸಂಪನ್ನಗೊಂಡಿತು.
ಆರಾಧನಾ ಮಹೋತ್ಸವ ಕಾರ್ಯಕ್ರಮವನ್ನು ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು .ಪ್ರಾರಂಭ ದಲ್ಲಿ ಹುಸೇನ್ ಸಾಬ್ ಕನಕಗಿರಿ ಅವರಿಂದ 'ದಾಸ ಸಂಕೀರ್ತನ' ಕಾರ್ಯಕ್ರಮ ಜರಗಿತು .ಸಂಜೆ ನೃತ್ಯ ಕಾರ್ಯಕ್ರಮ ಶಿವಪದಂ ಶ್ರೀಚಂದ್ರಶೇಖರ ನಾವಡ ತಂಡದಿಂದ ಕಾರ್ಯಕ್ರಮ ನಡೆಯಿತು. ಸಂಜೆ ಎಡನೀರು ಮೇಳದ ಪೂರ್ವ ಕಲಾವಿದರಿಂದ ಶ್ರೀಕೃಷ್ಣ ಜನ್ಮ, ಕೃಷ್ಣಲೀಲೆ, ಕಂಸವಧೆ, ಎಂಬ ಯಕ್ಷಗಾನ ಬಯಲಾಟ ಜರಗಿತು .ಶುಕ್ರವಾರ ಬೆಳಿಗ್ಗೆ ಉಜಿರೆ ಅಶೋಕ್ ಭಟ್ ಅವರ ನೇತೃತ್ವದಲ್ಲಿ 'ಶಮಂತಕ ಮಣಿ' ಎಂಬ ಯಕ್ಷಗಾನ ತಾಳಮದ್ದಳೆ ಹಾಗೂ ಸಂಜೆ ಬೆಂಗಳೂರು ಶ್ರೀ ಅನಂತಕೃಷ್ಣ ಶರ್ಮ ಬಳಗದವರಿಂದ 'ಲಯ ಲಹರಿ' ಕಾರ್ಯಕ್ರಮ ಜರಗಿತು. ಆರಾಧನಾ ಮಹೋತ್ಸವ ಸಮಾಪನ ದಿನದಲ್ಲಿ ಬೆಳಗ್ಗೆ ಉದಯಕುಮಾರ್ ಕಾಸರಗೋಡು ಅವರಿಂದ ನಾಗಸ್ವರ ಹಾಗೂ ಸಂಜೆ ಶ್ರೀ ಹನುಮಗಿರಿ ಮೇಳದವರಿಂದ ಯಕ್ಷಗಾನ ಬಯಲಾಟ ಕಾರ್ಯಕ್ರಮಗಳು ಜರಗಿ ಆರಾಧನ ಮಹೋತ್ಸವ ಸಮಾಪ್ತಿಗೊಂಡಿತು.