ಕಾಸರಗೋಡು: ಜಿಲ್ಲಾ ಪಂಚಾಯತ್ ನ ವಾರ್ಷಿಕ ಯೋಜನೆಯಲ್ಲಿ ಅಳವಡಿಸಿ ಜಾರಿಗೊಳಿಸುವ ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳ ಕಲಿಕೆಗೆ ಆರ್ಥಿಕ ಸಹಾಯ ಯೋಜನೆಯ ಅಂಗವಾಗಿ ಅರ್ಜಿ ಕೋರಲಾಗಿದೆ.
ಮೆಡಿಕಲ್, ಇಂಜಿನಿಯರಿಂಗ್, ಪದವಿ, ಸ್ನಾತಕೋತ್ತರ ಪದವಿ, ಸಂಶೋಧನೆ, ಪಾಲಿಟೆಕ್ನಿಕ್, ಇನ್ನಿತರ ಸರಕಾರಿ ಅಂಗೀಕೃತ ರೆಗ್ಯುಲರ್ ಕೋರ್ಸ್ ಗಳು, ರಾಜ್ಯ ಹೊರಭಾಗದ ಅಂಗೀಕೃತ ವಿವಿಗಳ ಕೋರ್ಸ್ ಗಳು ಇತ್ಯಾದಿಗಳಲ್ಲಿ ಕಲಿಕೆ ನಡೆಸುತ್ತಿರುವವರು ಅರ್ಜಿ ಸಲ್ಲಿಸಬಹುದು, ಅರ್ಜಿ ಗಳು ಗ್ರಾಮಸಭೆ, ಊರುಕೂಟ ಅಂಗೀಕರಿಸಿರುವ ಪಟ್ಟಿಯಲ್ಲಿ ಸೇರಿರಬೇಕು. ಜಾತಿ, ಆದಾಯ ಸರ್ಟಿಫಿಕೆಟ್ ಗಳು, ಕಲಿಯುತ್ತಿರುವ ಸಂಸ್ಥೆಗಳ ಮುಖ್ಯಸ್ಥರ ದೃಡೀಕರಣ ಪತ್ರ, ಪಂಚಾಯತ್, ಬ್ಲೋಕ್ ಮಟ್ಟದಲ್ಲಿ ಈ ಅಗತ್ಯಕ್ಕಾಗಿ ಮೊಬಲಗು ಲಭಿಸಿಲ್ಲ ಎಂದು ಖಚಿತಪಡಿಸುವ ದೃಡೀಕರಣ ಪತ್ರ, ಆಧಾರ್ ಕಾರ್ಡ್, ಬಾಂಕ್ ಠೇವಣಿ ನಕಲುಗಳು ಇತ್ಯಾದಿಗಳ ಸಹಿತ ಅರ್ಜಿಯನ್ನು ಆ.31ರ ಮುಂಚಿತವಾಗಿ ಕಾಸರಗೋಡು ಟ್ರೈಬಲ್ ಡೆವೆಲಪ್ ಮೆಂಟ್ ಆಫೀಸ್ ಗೆ ಸಲ್ಲಿಸಬೇಕು. ದೂರವಾಣಿ ಸಂಖ್ಯೆ: 04994-255466.