ತಿರುವನಂತಪುರ: ರಾಜ್ಯದ ಕೋವಿಡ್ ಪರಿಸ್ಥಿತಿಯ ಅವಲೋಕನದ ನಿಟ್ಟಿನಲ್ಲಿ ಇಂದು ಮಹತ್ವದ ಸಭೆ ನಡೆಯಲಿದೆ. ಟಿಪಿಆರ್ ಆಧಾರಿತ ಪ್ರಸ್ತುತ ಜಾರಿಯಲ್ಲಿರುವ ನಿಯಂತ್ರಣದ ವ್ಯವಸ್ಥೆಯು ಬದಲಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಲಾಕ್‌ಡೌನ್ ರಿಯಾಯಿತಿಗಳ ಹೊಸ ಪ್ರಸ್ತಾಪಗಳ ಚರ್ಚೆ ನಡೆಯಲಿದ್ದು, ವಾರಾಂತ್ಯದ ಕಠಿಣ ಲಾಕ್ ಡೌನ್ ಹಿಂಪಡೆಯುವರೇ ಎಂದು ಜನರು ಕುತೂಹಲಿಗಳಾಗಿದ್ದಾರೆ.
ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ರೋಗಿಗಳ ಸಂಖ್ಯೆಯ ಮೇಲೆ ನಿರ್ಬಂಧಗಳನ್ನು ವಿಧಿಸಲು ಸರ್ಕಾರ ಪರಿಗಣಿಸುತ್ತಿದೆ. ಅಸ್ತಿತ್ವದಲ್ಲಿರುವ ವ್ಯವಸ್ಥೆಯನ್ನು ಬದಲಿಸಲು ಹೊಸ ಪ್ರಸ್ತಾಪಗಳನ್ನು ಸಲ್ಲಿಸುವಂತೆ ಮುಖ್ಯಮಂತ್ರಿ ನಿನ್ನೆ ತಜ್ಞರ ಸಮಿತಿಗೆ ಸೂಚಿಸಿದ್ದರು.