ನವದೆಹಲಿ: ಕೊರೊನಾವೈರಸ್ ಮಹಾಮಾರಿ ಜಗತ್ತಿನಾದ್ಯಂತ ಲಕ್ಷಾಂತರ ಜನರ ಜೀವ ಮತ್ತು ಜೀವನವನ್ನು ಕಿತ್ತುಕೊಂಡಿದೆ. ಕೊವಿಡ್-19 ಸೋಂಕು SARS-CoV-2 ರೋಗಾಣುವಿನಿಂದ ಹರಡುತ್ತಿರುವುದಾಗಿ ಸೂಕ್ಷ್ಮಾಣುರೋಗಶಾಸ್ತ್ರಜ್ಞರು ಹೇಳಿದ್ದಾರೆ.
ಕೊರೊನಾವೈರಸ್ ಲಸಿಕೆ ವಿತರಣೆಯು ಸಾಂಕ್ರಾಮಿಕ ಪಿಡುಗು ನಿಯಂತ್ರಿಸುವುದಕ್ಕೆ ಇರುವ ಒಂದು ಪ್ರಮುಖ ಮಾರ್ಗವಾಗಿದೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಹೇಳಿದ್ದಾರೆ. ಕೊವಿಡ್-19 ಲಸಿಕೆ ಹಾಕಿಸಿಕೊಳ್ಳುವುದಕ್ಕೆ ಮಕ್ಕಳು, ಯುವಕರು, ವಯಸ್ಕರು ಸೇರಿದಂತೆ ಪ್ರತಿಯೊಬ್ಬರೂ ಭಯಪಡುತ್ತಿದ್ದಾರೆ.
ಕೊವಿಡ್-19 ಲಸಿಕೆ ಪಡೆದುಕೊಳ್ಳುವುದು ಹೇಗೆ?, ಲಸಿಕೆ ಪಡೆಯಲು ಯಾವ ಮಾರ್ಗಗಳನ್ನು ಅನುಸರಿಸಬೇಕು ಎಂಬುದನ್ನು ನೀವಾಗಲೇ ತಿಳಿದುಕೊಂಡಿರುತ್ತೀರಿ. ಆದರೆ ಕೊರೊನಾವೈರಸ್ ಲಸಿಕೆ ಪಡೆದ ನಂತರದಲ್ಲಿ ನಮ್ಮ ದೇಹದಲ್ಲಿ ಆಗುವ ಬದಲಾವಣೆಗಳು ಮತ್ತು ಆಂತರಿಕ ಪ್ರಕ್ರಿಯೆ ಹೇಗಿರುತ್ತೆ ಎಂಬುದರ ಕುರಿತು ಒಂದು ವಿಶೇಷ ವರದಿಗಾಗಿ ಮುಂದೆ ಓದಿ.
ಯಾವುದೇ ಲಸಿಕೆ ಬಗ್ಗೆ ತಿಳಿದುಕೊಳ್ಳಬೇಕಾದ ಮೊದಲ ಅಂಶ
ಸಾಮಾನ್ಯವಾಗಿ ಯಾವುದೇ ಲಸಿಕೆಯಿರಲಿ. ದೇಹದಲ್ಲಿ ಇರುವ ರೋಗಾಣುಗಳ ವಿರುದ್ಧ ಸಮರ್ಥವಾಗಿ ಹೋರಾಡುವುದು ಹೇಗೆ ಎಂಬುದನ್ನು ಲಸಿಕೆ ಕಲಿಸಿಕೊಡುತ್ತದೆ. ರೋಗಾಣುಗಳನ್ನು ನಿಭಾಯಿಸುವುದು ಹಾಗೂ ರೋಗ ನಿರೋಧಕ ಶಕ್ತಿ ಮೂಲಕ ಹೆಚ್ಚಿನ ಅನಾರೋಗ್ಯದಿಂದ ರಕ್ಷಿಸುವ ಕಾರ್ಯವನ್ನು ಲಸಿಕೆಗಳು ಮಾಡುತ್ತವೆ.
ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ಲಭ್ಯವಿರುವ ಎಲ್ಲಾ ಮೂರು COVID-19 ಲಸಿಕೆಗಳು SARS-CoV-2 ವೈರಸ್ ಅಥವಾ ಕೊರೊನಾವೈರಸ್‌ನ ಪ್ರೊಟೀನ್ ಹೆಚ್ಚಿಸುವವು ಎಂದು ಹೇಳಲಾಗುತ್ತದೆ. SARS-CoV-2 ಒಂದು ಮಾದರಿಯ ರೋಗಾಣುವಾಗಿದೆ. ಅದರ ಮೇಲೆ ಉಬ್ಬುಗಳಿದ್ದು, ಒಂದು ರೀತಿಯ ಬೇಸ್‌ಬಾಲ್ ಗಾಲ್ಫ್ ಟೀಸ್‌ನಿಂದ ಆವೃತವಾಗಿದೆ. ಉಬ್ಬುಗಳೇ ಸ್ಪೈಕ್ ಪ್ರೋಟೀನ್ ಆಗಿವೆ.
ಕೊರೊನಾವೈರಸ್ ಸೋಂಕಿನ ರೋಗಾಣುಗಳ ಮೇಲೆ ಪ್ರೊಟೀನ್ ಹೆಚ್ಚಳದಿಂದ ಕೊವಿಡ್-19 ವೈರಸ್ ಮನುಷ್ಯದ ಜೀವಕೋಶಗಳಿಗೆ ಪ್ರವೇಶಿಸಲು ಅವಕಾಶ ಸಿಗುತ್ತದೆ. ಆದ್ದರಿಂದ ರೋಗಾಣುಗಳು ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತವೆ. ಇವು ದೇಹದೊಳಗಿನ ಜೀವಕೋಶಗಳ ಮೇಲೆ ಅದರಲ್ಲೂ ವಿಶೇಷವಾಗಿ ಶ್ವಾಸಕೋಶಗಳ ಮೇಲೆ ಅಂಟಿಕೊಳ್ಳುತ್ತವೆ. ಹೀಗೆ ಅಂಟಿಕೊಂಡ ಪ್ರೊಟೀನ್ ರೋಗಾಣು ವಿರುದ್ಧ ಹೋರಾಡುವ ಶಕ್ತಿಯನ್ನು ವೃದ್ಧಿಸುತ್ತವೆ.
ಕೊರೊನಾವೈರಸ್ ಲಸಿಕೆಯ ಕಾರ್ಯ ವಿಧಾನ ಹೇಗಿರಲಿದೆ?
ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ನೀಡುವ ಫೈಜರ್-ಬಯೋ-ಎನ್-ನಟೆಕ್, ಮಾಡರ್ನಾ ಮತ್ತು ಜಾನ್ಸನ್ ಆಂಡ್ ಜಾನ್ಸನ್ ಲಸಿಕೆಗಳು ಇದೇ ರೀತಿಯಾಗಿ ಕಾರ್ಯ ನಿರ್ವಹಿಸಲಿವೆ. ಲಸಿಕೆಯಲ್ಲಿ ದೇಹದ ಕಣಗಳನ್ನು ನೀಡುವ ಮೂಲಕ ಪ್ರೊಟೀನ್ ಪ್ರಮಾಣವನ್ನು ಹೆಚ್ಚಿಸುತ್ತವೆ. ಫೈಜರ್ ಮತ್ತು ಮಾಡರ್ನಾ ಲಸಿಕೆಯಲ್ಲಿ mRNA ಕಣವನ್ನು ಹೊಂದಿರುತ್ತದೆ. ಸಾಮಾನ್ಯವಾಗಿ mRNA ಮಾದರಿಯ ಲಸಿಕೆಯ ಪರಿಣಾಮವು ಆರು ತಿಂಗಳಿನಿಂದ ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಅವಧಿವರೆಗೂ ಇರುತ್ತದೆ. ಈ ಲಸಿಕೆಗಳು ಮನುಷ್ಯನ ದೇಹದಲ್ಲಿರುವ ರೋಗಾಣುವನ್ನು ಗುರುತಿಸಿ ಅವುಗಳ ವಿರುದ್ಧ ಹೋರಾಡಬಲ್ಲ ಪ್ರತಿಕಾಯಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ.
mRNA ಮಾದರಿ ಲಸಿಕೆ ಎಂದರೆ ಅರ್ಥವೇನು?
ಫೈಜರ್-ಬಯೋ-ಎನ್-ನಟೆಕ್, ಮಾಡರ್ನಾ ಮತ್ತು ಜಾನ್ಸನ್ ಆಂಡ್ ಜಾನ್ಸನ್ ಲಸಿಕೆಗಳನ್ನು mRNA ಲಸಿಕೆ ಎಂದು ಕರೆಯಲಾಗುತ್ತದೆ. ಅಸಲಿಗೆ ಈ ಮಾದರಿ ಲಸಿಕೆಗಳು ದೇಹದಲ್ಲಿರುವ ವೈರಸ್ ಅನ್ನು ಗುರುತಿಸಿ ಅವುಗಳ ವಿರುದ್ಧ ರಕ್ಷಣೆ ನೀಡುವುದಕ್ಕಾಗಿ ಹೆಚ್ಚುವರಿ ರೋಗ ನಿರೋಧಕ ಶಕ್ತಿ ವೃದ್ಧಿಸುವ ಸಾಮರ್ಥ್ಯ ಹೊಂದಿರುತ್ತವೆ. ಇಂಥ ಲಸಿಕೆಯನ್ನೇ mRNA ಲಸಿಕೆ ಎಂದು ಕರೆಯಲಾಗುತ್ತದೆ.
ಜಾನ್ಸನ್ ಆಂಡ್ ಜಾನ್ಸನ್ ಲಸಿಕೆಯು ರೋಗಾಣುವಿನ ಡಿಎನ್‌ಎ ಕಣವನ್ನು ಗುರುತಿಸುತ್ತದೆ. ಈ ಲಸಿಕೆಯಲ್ಲಿ ಅದೆನೋವೈರಸ್ ಎಂಬ ರೋಗಾಣುವನ್ನು ಬಳಸಿಕೊಳ್ಳಲಾಗುತ್ತಿದ್ದು, ಈ ವೈರಸ್ ಮರು ಉತ್ಪತ್ತಿಯ ಗುಣವನ್ನು ಹೊಂದಿರುವುದಿಲ್ಲ ಆದರೆ ಮನುಷ್ಯದ ಡಿಎನ್‌ಎ ಕಣದಲ್ಲಿ ಪ್ರೊಟೀನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಮನುಷ್ಯನ ದೇಹದ ಡಿಎನ್‌ಎ ಕಣಗಳ ಜೊತೆಗೆ ರೋಗಾಣು ವಿರುದ್ಧ ಹೋರಾಡಬಲ್ಲ ಕಣಗಳ ಪ್ರಮಾಣವೂ ಹೆಚ್ಚಾಗುತ್ತದೆ.
ಮೂರು ಕೊವಿಡ್-19 ಲಸಿಕೆಗಳ ನಡುವಿನ ವ್ಯತ್ಯಾಸ
ಫೈಜರ್-ಬಯೋ-ಎನ್-ನಟೆಕ್, ಮಾಡರ್ನಾ ಮತ್ತು ಜಾನ್ಸನ್ ಆಂಡ್ ಜಾನ್ಸನ್ ಲಸಿಕೆಗಳೆಲ್ಲ mRNA ಲಸಿಕೆಗಳೇ ಆಗಿದ್ದರು ಕೆಲ ವ್ಯತ್ಯಾಸಗಳಿವೆ. ಫೈಜರ್ ಮತ್ತು ಮಾಡರ್ನಾ ಲಸಿಕೆಗಳು mRNA ಮೂಲಕ ದೇಹದಲ್ಲಿ ಪ್ರೊಟೀನ್ ಪ್ರಮಾಣವನ್ನು ಹೆಚ್ಚಿಸುವ ಕಾರ್ಯವನ್ನು ಮಾಡುತ್ತದೆ. ಆದರೆ ಜಾನ್ಸನ್ ಆಂಡ್ ಜಾನ್ಸನ್ ಲಸಿಕೆಯು ನೇರವಾಗಿ DNA ಮೂಲಕ ಕೆಲಸ ಶುರು ಮಾಡಲಿದ್ದು, ಮುಂದಿನ ಹಂತದಲ್ಲಿ ಮೂರೂ ಲಸಿಕೆಗಳು ಒಂದೇ ರೀತಿಯಲ್ಲಿ ಕಾರ್ಯ ನಿರ್ವಹಿಸಲಿವೆ.
ಲಸಿಕೆ ಪಡೆದುಕೊಂಡವರಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳೇನು?
ಒಂದು ಬಾರಿ ಕೊರೊನಾವೈರಸ್ ಲಸಿಕೆಯನ್ನು ಪಡೆದುಕೊಂಡ ನಂತರದಲ್ಲಿ ಅಂಗಾಂಶ ಕೋಶಗಳು ಮತ್ತು ಸ್ನಾಯುಗಳು, ಚರ್ಮ ಮತ್ತು ಅಂಗಗಳಲ್ಲಿ ವಾಸಿಸುವ ವಿಶೇಷ ಪ್ರತಿರಕ್ಷಣಾ ಕೋಶಗಳು ವೃಕ್ಷರೂಪದ ಕೋಶಗಳಲ್ಲಿ mRNA ಅಥವಾ DNA ಅಂಶವನ್ನು ಸೇರಿಕೊಳ್ಳುತ್ತದೆ. ತದನಂತರದಲ್ಲಿ ವೃದ್ಧರೂಪದ ಕಣಗಳು ಕಾವಲುಗಾರನ ರೀತಿಯಲ್ಲಿ ದೇಹದ ಪ್ರತಿಯೊಂದು ಭಾಗಕ್ಕೆ ತೆರಳಿ ಕೊರೊನಾವೈರಸ್ ರೀತಿಯ ಆಕ್ರಮಣಕಾರಿ ಸೂಕ್ಷ್ಮಾಣುಗಳನ್ನು ಪತ್ತೆ ಮಾಡುತ್ತದೆ. mRNA ಅಥವಾ DNA ಅಂಶವು ಅಂಗಾಂಶ ಮತ್ತು ವೃಕ್ಷರೂಪದ ಕಣದಲ್ಲಿ ಸೇರಿಕೊಳ್ಳುತ್ತಿದ್ದಂತೆ ಪ್ರೊಟೀನ್ ಅಂಶವನ್ನು ಹೆಚ್ಚಿಸಿಕೊಳ್ಳುವ ಕಾರ್ಯವನ್ನು ಶುರು ಮಾಡುತ್ತದೆ. ಈ ಪ್ರಕ್ರಿಯೆಗೆ ಕನಿಷ್ಠ 12 ಗಂಟೆ ತೆಗೆದುಕೊಳ್ಳಲಾಗುತ್ತದೆ. ಅನಂತರ ಪ್ರತಿಕಾಯ ಶಕ್ತಿಯನ್ನು ತೋರಿಸುವುದಕ್ಕೆ ಪ್ರೊಟೀನ್ ಸಜ್ಜುಗೊಂಡು mRNA ಅಥವಾ DNA ಕಣಗಳನ್ನು ಹೊಡೆದುರುಳಿಸುವ ಮತ್ತು ಹೊರಹಾಕುವುದಕ್ಕೆ ಪ್ರಾರಂಭಿಸುತ್ತದೆ.
ನಿಮ್ಮ ದೇಹದಲ್ಲಿ ಜೀವಕೋಶಗಳು ತಮ್ಮದೇ ಆದ ಸ್ಪೈಕ್ ಪ್ರೋಟೀನ್‌ಗಳನ್ನು ತಯಾರಿಸಿದ್ದರೂ ಸಹ ಸಂಪೂರ್ಣ ವೈರಸ್‌ನ್ನು ಸೃಷ್ಟಿಸುವಷ್ಟು ಮಾಹಿತಿ ಇರುವುದಿಲ್ಲ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಆದರೆ ಸ್ಪೈಕ್ ಪ್ರೋಟೀನ್ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುವ ಹಾಗೂ ಹೆಚ್ಚಿನ ರಕ್ಷಣೆ ಒದಗಿಸಲು ಪ್ರಚೋದಿಸಬಹುದು. ಈ ಹಂತದಲ್ಲಿ ಕೊರೊನಾವೈರಸ್ ಆಕ್ರಮಣ ಮಾಡಿದರೂ ಅದರ ವಿರುದ್ಧ ಹೋರಾಡುವುದಕ್ಕೆ ಸ್ಪೈಕ್ ಪ್ರೊಟೀನ್ ಸಿದ್ಧವಾಗಿರುತ್ತದೆ.
ಅಂಗಾಂಶ ಕೋಶಗಳು ಮತ್ತು ವೃಕ್ಷರೂದ ಕೋಶಗಳು ಸ್ಪೈಕ್ ಪ್ರೋಟೀನ್‌ಗಳನ್ನು ನಿರೀಕ್ಷಿಸದ ಕಣಗಳು ಎಂದು ಗುರುತಿಸಿದರೆ ಮುಗಿಯಿತು. ಜೀವಕೋಶದಲ್ಲಿ ಬೇರೆ ಸ್ಪೈಕ್ ಪ್ರೊಟಿನ್ ಗುರತಿಸಲು ಬೇರೆಯದ್ದೇ ವ್ಯವಸ್ಥೆ ಮಾಡುತ್ತವೆ. ಈ ಹಂತದಲ್ಲಿ ಸ್ಪೈಕ್ ಪ್ರೊಟೀನ್ ಇರುವ ಬಗ್ಗೆ ಅಪಾಯದ ಮುನ್ಸೂಚನೆಯನ್ನು ರವಾನಿಸಲಾಗುತ್ತದೆ. ಈ ಎಚ್ಚರಿಕೆ ಸಂಕೇತಗಳು ನಿಮ್ಮ ದೇಹದ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಹೆಚ್ಚಿಸುತ್ತದೆ.
ಪ್ರತಿರಕ್ಷಣಾ ವ್ಯವಸ್ಥೆ ಪುನರುಜ್ಜೀವನಗೊಂಡ ನಂತರ ಮುಂದೇನು?
ಕೊರೊನಾವೈರಸ್ ಲಸಿಕೆ ವಿತರಿಸಿದ ಬಳಿಕ ದೇಹದಲ್ಲಿ ಸ್ಪೈಕ್ ಪ್ರೊಟೀನ್ ಅಂಶ ಹೆಚ್ಚಾಗಿದೆ. ಈ ಹಂತದಲ್ಲಿ ರೋಗಾಣುಗಳ ವಿರುದ್ಧ ಸಮರ್ಥವಾಗಿ ಹೋರಾಡುವುದಕ್ಕೆ ಪ್ರತಿಕಾಯ ವ್ಯವಸ್ಥೆ ಸಜ್ಜುಗೊಂಡಿದೆ. ಹೊರಗಿನ ಆಕ್ರಮಣಕಾರಿ ರೋಗಾಣುವನ್ನು ಗುರುತಿಸುವ ರೋಗನಿರೋಧಕ ಕಣಗಳನ್ನು ಬಿ-ಕಣ ಮತ್ತು ಟಿ-ಕಣಗಳು ಎಂದು ಕರೆಯಲಾಗುತ್ತದೆ. ಹೊರಗಿನ ರೋಗಾಣು ದೇಹವನ್ನು ಪ್ರವೇಶಿಸುತ್ತಿದ್ದಂತೆ ಆ ಪ್ರದೇಶಕ್ಕೆ ಲಗ್ಗೆಯಿಡುವ ಈ ಕಣಗಳು ಹೊರಗಿನ ಆಕ್ರಮಣಕಾರಿ ರೋಗಾಣುವಿನ ವಿರುದ್ಧ ಹೋರಾಡುತ್ತವೆ ಮತ್ತು ರಕ್ಷಣೆ ನೀಡುತ್ತವೆ.
B-ಕಣಗಳ ಸಾಮರ್ಥ್ಯವೇನು?:
ಬಿ-ಕಣಗಳು ಆಕ್ರಮಣಕಾರಿ ಪ್ರೊಟೀನ್ ಹೆಚ್ಚುವಿಕೆಯನ್ನು ನಿಯಂತ್ರಿಸುವಂತಾ ಬಲೆಯನ್ನು ಹೆಣೆಯುವಲ್ಲಿ ಚತುರತೆಯನ್ನು ಹೊಂದಿರುತ್ತದೆ. ಭಿನ್ನವಾದ ಬಿ-ಕಣಗಳು ವಿಭಿನ್ನ ರೀತಿಯ ರೋಗ ನಿರೋಧಕ ಶಕ್ತಿಯನ್ನು ಹೊಂದಿದ್ದು, ದೇಹದ ಹಲವು ಭಾಗಗಳಲ್ಲಿರುವ ಸೂಕ್ಷ್ಮಾಣುಗಳನ್ನು ಪತ್ತೆ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಒಂದು ಬಾರಿ ರಕ್ಷಣೆಗೆ ತೆರಳಿದ ಬಿ-ಕಣಗಳು ನಿರಂತರವಾಗಿ ರೋಗ ನಿರೋಧಕ ಶಕ್ತಿಯನ್ನು ಬಿಡುಗಡೆ ಮಾಡುವ ಮೂಲಕ ಕೈಗಾರಿಕೆಯ ರೀತಿಯಲ್ಲಿ ಕೆಲಸ ಮಾಡುತ್ತದೆ.
T-ಕಣಗಳ ಸಾಮರ್ಥ್ಯವೇನು?:
ಸಾಮಾನ್ಯವಾಗಿ ಟಿ-ಕಣಗಳು ಸಹಾಯಕರ ಕಣಗಳಾಗಿವೆ. ದೇಹದಲ್ಲಿ ಅಪಾಯಕಾರಿ ಲಕ್ಷಣಗಳು ಗೋಚರಿಸಿದ ಸಂದರ್ಭದಲ್ಲಿ ಬಿ-ಕಣಗಳ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಬಿಡುಗಡೆಗೊಳಿಸುವ ಹಂತದಲ್ಲಿ ಟಿ-ಕಣಗಳು ಸಹಾಯಕವಾಗಿ ಕೆಲಸ ಮಾಡುತ್ತವೆ. ಇನ್ನೊಂದು ದಿಕ್ಕಿನಲ್ಲಿ ಇದೇ ಟಿ-ಕಣಗಳಿಗೆ ಅಪಾಯಕಾರಿ ರೋಗಾಣುಗಳು ಪತ್ತೆ ಮಾಡಿದರೆ ಅದನ್ನು ಹೊಡೆದು ಹಾಕುವ ಸಾಮರ್ಥ್ಯವಿದೆ. ಆದರೆ ರೋಗಾಣುವಿನ ವಿರುದ್ಧ ಹೋರಾಡಬಲ್ಲ ಕಣಗಳನ್ನು ಹುಟ್ಟುಹಾಕುವ ಸಾಮರ್ಥ್ಯ ಇರುವುದಿಲ್ಲ.
ಕೊವಿಡ್-19 ಲಸಿಕೆ ಹಾಕಿಸಿಕೊಂಡರೆ ಕೈ ನೋವು ಏಕೆ?
ಒಂದು ಬಾರಿ ಕೊರೊನಾವೈರಸ್ ಲಸಿಕೆಯನ್ನು ಪಡೆದುಕೊಂಡ ವೇಳೆ ನಿಮ್ಮ ದೇಹದಲ್ಲಿ ಇಷ್ಟೆಲ್ಲ ಪ್ರಕ್ರಿಯೆಗಳು ನಡೆಯುತ್ತಿದ್ದು, ಅದರ ಕೆಲವು ಲಕ್ಷಣಗಳು ನಿಮ್ಮ ಗಮನಕ್ಕೂ ಬಂದಿರುತ್ತವೆ. ನೀವು ಲಸಿಕೆ ಪಡೆದ ಕೆಲವು ಗಂಟೆಗಳಲ್ಲಿ ನಿಮ್ಮ ಕೈ ನೋವು ಶುರುವಾದರೆ ವೃಕ್ಷರೂಪದ ಕಣಗಳು, ಟಿ-ಕಣಗಳು, ಬಿ-ಕಣಗಳು ದೇಹದಲ್ಲಿರುವ ಅಪಾಯಕಾರಿ ರೋಗಾಣುಗಳನ್ನು ಹುಡುಕಿ ಹೊರಟಿವೆ ಎಂದರ್ಥ. ಈ ಹಂತದಲ್ಲಿ ನಿಮಲ್ಲಿ ಜ್ವರ ಅಥವಾ ಅನಾರೋಗ್ಯದ ಅನುಭವಗಳು ಗೋಚರಿಸುತ್ತವೆ. ಸ್ಪೈಕ್ ಪ್ರೊಟೀನ್ ವಿರುದ್ಧ ಹೇಗೆ ಹೊರಾಡಬೇಕು ಎಂಬುದನ್ನು ದೇಹವು ಅರಿತುಕೊಳ್ಳುತ್ತಿರುವ ಸಂದರ್ಭದಲ್ಲಿ ಇದು ಸಹಜ ಪ್ರಕ್ರಿಯೆ ಆಗಿರುತ್ತದೆ. ಇದರ ಹೊರತಾಗಿ ನಿಮಗೆ ಕೊವಿಡ್-19 ಸೋಂಕು ಈಗಾಗಲೇ ಅಂಟಿಕೊಂಡಿದ್ದರೆ, ಅದಾಗಲೇ ನಿಮ್ಮ ದೇಹವು ರೋಗಾಣುವಿನ ವಿರುದ್ಧ ಹೇಗೆ ಹೋರಾಡಬೇಕು ಎಂಬುದನ್ನು ಕಲಿತಿರುತ್ತದೆ ಎಂದು ಅರ್ಥವಾಗುತ್ತದೆ.