ಕೋಯಿಕ್ಕೋಡ್: ಲಾಕ್ ಡೌನ್ ಉಲ್ಲಂಘಿಸಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದಕ್ಕಾಗಿ ಚಲನಚಿತ್ರ ನಟರಾದ ಮಮ್ಮುಟ್ಟಿ ಮತ್ತು ರಮೇಶ್ ಪಿಶಾರಡಿ ವಿರುದ್ಧ ಪ್ರಕರಣ ದಾಖಲಾಗಿದೆ. ಕಂಟೋನ್ಮೆಂಟ್ ವಲಯದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮವೊಂದರಲ್ಲಿ ನಟರು ಭಾಗವಹಿಸಿದ್ದರು. ಘಟನೆಯಲ್ಲಿ ಎಲತ್ತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಬ್ಬರೂ ಮೈತ್ರಾ ಆಸ್ಪತ್ರೆಯಲ್ಲಿ ಸಂಧಿವಾತಕ್ಕೆ ರೊಬೊಟಿಕ್ ಸರ್ಜರಿ ವಿಭಾಗದ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದರು.
ಕಳೆದ ಮಂಗಳವಾರ ಈ ಘಟನೆ ನಡೆದಿದೆ. ಉದ್ಘಾಟನಾ ಸಮಾರಂಭವನ್ನು ಆಸ್ಪತ್ರೆಯಲ್ಲಿ ನಡೆಸಲಾಯಿತು. ಕಂಟೋನ್ಮೆಂಟ್ ವಲಯದ ಭಾಗವಾಗಿರುವ ಆಸ್ಪತ್ರೆಯಲ್ಲಿ 300 ಕ್ಕೂ ಹೆಚ್ಚು ಜನರು ಸಮಾರಂಭದಲ್ಲಿ ಭಾಗವಹಿಸಿದ್ದರು.