ಕಾಸರಗೋಡು: ತಲಪ್ಪಾಡಿಯಲ್ಲಿ 3 ರಿಂದ ಮೊಬೈಲ್ ಟೆಸ್ಟಿಂಗ್ ಯೂನಿಟ್ ಏರ್ಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ತಿಳಿಸಿದರು.
ಆರ್.ಟಿ.ಸಿ.ಆರ್. ತಪಾಸಣೆಯ ಸ್ಪೇಸ್ ನೊಂದಿಗೆ ಸಹಕರಿಸಿ ಈ ಸೌಲಭ್ಯ ಏರ್ಪಡಿಸಲಾಗುವುದು. ಈ ಮೂಲಕ ಗಡಿ ಪ್ರದೇಶದಲ್ಲಿ ಸದ್ರಿ ತಲೆದೋರಿರುವ ಸಮಸ್ಯೆ ಬಗೆಹರಿಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿರುವರು.