HEALTH TIPS

ಸತ್ಯದ ಮಹತ್ವವನ್ನು ಕಾವ್ಯಗಳಲ್ಲಿ ಓದುವುದರ ಜತೆಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು-ಪ್ರೊ.ಪಿ.ಎನ್ ಮೂಡಿತ್ತಾಯ

                                           

                ಕಾಸರಗೋಡು: ಸತ್ಯದ ಮಹತ್ವದ ನೆಲೆಯನ್ನು ಕಾವ್ಯಗಳಲ್ಲಿ ಓದುವುದರ ಜತೆಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿಶ್ರಾಂತ ಪ್ರಾಂಶುಪಾಲ ಪ್ರೊ.ಪಿ.ಎನ್ ಮೂಡಿತ್ತಾಯ ತಿಳಿಸಿದ್ದಾರೆ. ಅವರು ಕಾಸರಗೋಡು ಸರ್ಕಾರಿ ಕಾಲೇಜಿನ ನ್ನಡ ಸ್ನಾತಕೋತ್ತರ ಅಧ್ಯಯನ ಮತ್ತುಸಂಶೋಧನಾ ವಿಭಾಗದ ವತಿಯಿಂದ ಕಾಸರಗೋಡು ಕನ್ನಡ ಬಳಗ ಇದರ ಸಹಯೋಗದೊಂದಿಗೆ ನಡೆದ ಮಾನಸೋಲ್ಲಾ ಸಸರಣಿಯ ಐದನೆಯ ಜಾಲಗೋಷ್ಠಿ ಕಾರ್ಯಕ್ರಮದಲ್ಲಿ`ಹರಿಶ್ಚಂದ್ರ ಕಾವ್ಯದಲ್ಲಿ ಸತ್ಯ ಮತ್ತು ಸುಳ್ಳಿನ ನೆಲೆ'ಎಂಬ ವಿಷಯದಲ್ಲಿ ಮಾತನಾಡಿದರು.

             ಯುವ ತಲೆಮಾರು ಕೇವಲಆಧುನಿಕ ಮಾಧ್ಯಮಗಳಿಗೆ ಮೊರೆ ಹೋಗದೆ ಸಮಾಜ,ಓದು ಮುಂತಾದ ವಿಚಾರಗಳಲ್ಲಿತೊಡಗಿಸಿಕೊಳ್ಳುವುದು ಒಳಿತು. `ಸತ್ಯವೆಂಬುದೆ ಹರನು, ಹರನೆಂಬುದೇ ಸತ್ಯ' ಎಂಬ ಮಾತು `ಸತ್ಯಮತ್ತು ಭಗವಂತ'ಎರಡೂ ಬೇರೆಯಲ್ಲಎಂಬುದನ್ನು ಸಾರಿ ಹೇಳುತ್ತದೆ. ಹರಿಶ್ಚಂದ್ರ ಕಾವ್ಯ'ದಲ್ಲಿ ರಾಘವಾಂಕ ಕವಿ ತನ್ನ ಸ್ವಂತಿಕೆಯನ್ನು ಮೆರೆದಿದ್ದಾನೆ. ಈ ಕಾವ್ಯ ಸಾರ್ವಕಾಲಿಕ ಮೌಲ್ಯದ ಸಂದೇಶವನ್ನು ಸಾರುತ್ತದೆ ಎಂದು ತಿಳಿಸಿದರು.

                     ಕನ್ನಡ ವಿಭಾಗದ ಪ್ರಾಧ್ಯಾಪಿಕೆ ವೇದಾವತಿ ಯಸ್ ಸ್ವಾಗತಿಸಿದರು. ತೃತೀಯಪದವಿ ವಿದ್ಯಾರ್ಥಿನಿಯಾದ£ನ್ಯಾ ಬಿ ಕಾರ್ಯಕ್ರಮನಿರೂಪಿಸಿದರು. ದ್ವಿತೀಯ ಸ್ನಾತಕೋತ್ತರ ಪದವಿವಿದ್ಯಾರ್ಥಿ ಗಿರೀಶ್ ಕೃಷ್ಣ ವಂದಿಸಿದರು. ವಿಭಾಗದ ಅಧ್ಯಾಪಕರು, ವಿದ್ಯಾರ್ಥಿಗಳು, ಸಾಹಿತ್ಯಾಸಕ್ತ ಬಂಧುಗಳು, ಸಹೃದಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries