ತಿರುವನಂತಪುರ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪಾಲ್ಗೊಂಡ ರಾಜ್ಯ ಮಟ್ಟದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಕಪ್ಪು ಮಾಸ್ಕ್ ಧರಿಸಿದವರನ್ನು ಕ್ರೀಡಾಂಗಣದ ಒಳಗೆ ತೆರಳಲು ನಿರ್ಬಂಧಿಸಲಾಯಿತು. ಕಪ್ಪು ಮಾಸ್ಕ್ ಧರಿಸಿದವರಿಗೆ ಪೋಲೀಸರು ನೀಲಿ ಮುಖವಾಡಗಳನ್ನು ನೀಡಿದ ಬಳಿಕ ಕ್ರೀಡಾಂಗಣಕ್ಕೆ ಪ್ರವೇಶಿಸಲು ಅನುಮತಿಸಿದರು. ತಿರುವನಂತಪುರ ಸೆಂಟ್ರಲ್ ಸ್ಟೇಡಿಯಂನಲ್ಲಿ ಮುಖ್ಯಮಂತ್ರಿ ಧ್ವಜಾರೋಹಣ ಮಾಡಿದರು.
ಶಾಸಕಾಂಗದ ಒಳಗೆ ಮತ್ತು ಹೊರಗೆ ವಿರೋಧದ ಪ್ರತಿಭಟನೆಗಳ ನಡುವೆ ನಿಷೇಧ ಹೇರಲಾಯಿತು. ಕೊರೋನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಸಾರ್ವಜನಿಕರು, ಮಕ್ಕಳು ಮತ್ತು ಹಿರಿಯ ನಾಗರಿಕರು ಪಾಲ್ಗೊಳ್ಳುವುದು ನಿಷೇಧಿಸಲಾಗಿತ್ತು. ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಮುಖ್ಯಮಂತ್ರಿಗಳು 'ಸ್ವಾತಂತ್ರ್ಯ' ಪದವನ್ನು ಅರ್ಥಪೂರ್ಣವಾಗಿಸಬಹುದು ಎಂದು ಹೇಳಿದರು.
ಸಿಪಿಎಂ ಕಚೇರಿಗಳಲ್ಲೂ ರಾಷ್ಟ್ರಧ್ವಜವನ್ನು ಹಾರಿಸಲಾಯಿತು. ಸಿಪಿಎಂ ರಾಜ್ಯ ಕಾರ್ಯದರ್ಶಿ ಎ.ಕೆ. ವಿಜಯರಾಘವನ್ ರಾಷ್ಟ್ರ ಧ್ವಜವನ್ನು ಹಾರಿಸಿದರು. ಇತಿಹಾಸದಲ್ಲಿ ಮೊದಲ ಬಾರಿಗೆ ಸಿಪಿಎಂ ಕಚೇರಿಗಳಲ್ಲಿ ಧ್ವಜವನ್ನು ಹಾರಿಸಲಾಯಿತು.