ಕೊಚ್ಚಿ: ಅಫ್ಗಾನಿಸ್ತಾನದಲ್ಲಿ ವಿಜಯೋತ್ಸವ ಆಚರಿಸುತ್ತಿರುವ ತಾಲಿಬಾನ್ ಗುಂಪಿನ ವಿಡಿಯೊವೊಂದನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಮಂಗಳವಾರ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಇಬ್ಬರು ವ್ಯಕ್ತಿಗಳು ಮಲಯಾಳಂನಲ್ಲಿ ಮಾತನಾಡುತ್ತಿರುವುದು ಕೇಳಿಬರುತ್ತದೆ.
ವಿಡಿಯೊ ಹಂಚಿಕೊಂಡಿರುವ ಶಶಿ ತರೂರ್ ಟ್ವೀಟರ್‌ನಲ್ಲಿ ಹೀಗೆ ಬರೆದಿದ್ದಾರೆ...'ಇಲ್ಲಿ ಕನಿಷ್ಠ ಇಬ್ಬರು ಮಲಯಾಳಿ ತಾಲಿಬಾನ್‌ಗಳಿರುವಂತೆ ತೋರುತ್ತಿದೆ. ವಿಡಿಯೊನ 8 ಸಕೆಂಡ್‌ನಲ್ಲಿ ವ್ಯಕ್ತಿಯೊಬ್ಬರು 'ಸಂಸಾರಿಕಟ್ಟೆ' (ಮಾತಾಡಲಿ)' ಎಂದು ಹೇಳುತ್ತಾರೆ. ಇನ್ನೊಬ್ಬರು ಅದನ್ನು ಅರ್ಥ ಮಾಡಿಕೊಂಡಂತೆ ಕಾಣುತ್ತಿದೆ,' ಎಂದಿದ್ದಾರೆ.
ಪತ್ರಕರ್ತ ರಮೀಜ್ ಎಂಬುವವರು ಆಗಸ್ಟ್ 15 ರಂದು ಪೋಸ್ಟ್ ಮಾಡಿದ ವೀಡಿಯೊವನ್ನು ರೀಟ್ವೀಟ್ ಮಾಡಿಕೊಂಡಿರುವ ತರೂರ್ ಅದರಲ್ಲಿ ತಮ್ಮ ಅಭಿಪ್ರಾಯವನ್ನೂ ಸೇರಿಸಿದ್ದಾರೆ.
ತಾಲಿಬಾನಿಗಳು ಕಾಬೂಲ್ ತಲುಪಿದಾಗ ಸಂತೋಷದಿಂದ ಅಳುತ್ತಿರುವುದನ್ನು ವೀಡಿಯೊದಲ್ಲಿ ತೋರಿಸಲಾಗಿದೆ,
ಹೇಳುತ್ತಾರೆ. ಇನ್ನೊಬ್ಬರು ಅದನ್ನು ಅರ್ಥ ಮಾಡಿಕೊಂಡಂತೆ ಕಾಣುತ್ತಿದೆ,' ಎಂದಿದ್ದಾರೆ.
: ಅಫ್ಗಾನಿಸ್ತಾನದಲ್ಲಿ ಅಮೆರಿಕದ ಪಾತ್ರವೇನು? ಇಲ್ಲಿದೆ 20 ವರ್ಷಗಳ 'ರಕ್ತ ಚರಿತ್ರೆ'
ಶಶಿ ತರೂರ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಪತ್ರಕರ್ತ ಕೋರಾ ಅಬ್ರಹಾಂ ಎಂಬುವವರು, 'ಕೇರಳದ ಕೆಲ ಮಂದಿ ಜಿಹಾದಿ ಗುಂಪುಗಳನ್ನು ಸೇರುತ್ತಿರುವುದರಿಂದ ಬಲಪಂಥೀಯ ಗುಂಪುಗಳು ಕೇರಳ ವಿರುದ್ಧ ದ್ವೇಷಪೂರಿತ ಅಪಪ್ರಚಾರ ನಡೆಸುತ್ತಿವೆ. ಇಂಥ ಹೊತ್ತಿನಲ್ಲಿ ಹೀಗೆ ಟ್ವೀಟ್ ಮಾಡುವುದು ಅತ್ಯಂತ ಸಮಸ್ಯಾತ್ಮಕ. ನೀವು ಕೇರಳ ರಾಜಧಾನಿಯ ಸಂಸದರು ಎಂಬುದರ ಅರಿವು ಇದ್ದರೆ ಒಳಿತು,' ಎಂದು ಮನದಟ್ಟು ಮಾಡಿಸಿದ್ದಾರೆ.