ಮಧೂರು: ಭಾರತೀಯ ಜನತಾ ಎಸ್ ಸಿ ಮೋರ್ಚಾ ಜಿಲ್ಲಾ ಸಮಿತಿಯ ವತಿಯಿಂದ ಪಕ್ಷದ ಜಿಲ್ಲಾ ಕಛೇರಿಯಲ್ಲಿ ಅಯ್ಯಂಗಾಳಿ ಜಯಂತಿಯನ್ನು ಆಚರಿಸಲಾಯಿತು.
ಎಸ್ ಸಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಸಂಪತ್ ಪೆರ್ಣಡ್ಕರ ಅಧ್ಯಕ್ಷತೆಯಲ್ಲಿ ಸೇರಿದ ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಶ್ರೀಕಾಂತ್ ಪುಷ್ಪಾರ್ಚನೆಯ ಮೂಲಕ ಉದ್ಘಾಟಿಸಿ" ಕೇರಳವು ಸಂಪೂರ್ಣ ಸಾಕ್ಷರತೆಯನ್ನು ಹೊಂದಿರೋದು, ಸ್ತ್ರೀ ಸ್ವಾತಂತ್ರ್ಯ ಪಡೆದಿರೋದು ಕಮ್ಯುನಿಸ್ಟ್ ರ ಕೊಡುಗೆಯಲ್ಲ. ಇದು ಹತ್ತೊಂಬತ್ತನೇ ಶತಮಾನದಲ್ಲಿ ಹೋರಾಡಿ ಪಡೆದ ಅಯ್ಯಾಂಗಾಳಿಯಂತಹ ಮಹಾತ್ಮರ ಕೊಡುಗೆ ಎಂದು ನುಡಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸುಧಾಮ ಗೋಸಾಡ, ವೇಲಾಯುಧನ್, ಬಿಜೆಪಿ ಉಪಾಧ್ಯಕ್ಷರುಗಳಾದ ರಾಮಪ್ಪ ಮಂಜೇಶ್ವರ, ನ್ಯಾಯವಾದಿ ಸದಾನಂದ ರೈ, ಕಾರ್ಯದರ್ಶಿ ಎನ್ ಸತೀಶನ್, ಎಸ್ ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎಕೆ ಕಯ್ಯಾರ್ , ಎಸ್ ಟಿ ಮೋರ್ಚಾ ಜಿಲ್ಲಾಧ್ಯಕ್ಷ ಈಶ್ವರ ಮಾಸ್ತರ್, ಜಿಲ್ಲಾ ಪಂಚಾಯತಿ ಸದಸ್ಯ ನಾರಾಯಣ ನಾಯ್ಕ್ ಅಯ್ಯಾಂಗಾಳಿ ಜಯಂತಿ ಯ ಸಂದೇಶವನ್ನು ಸಾರಿದರು.
ಕಾರ್ಯಕ್ರಮದಲ್ಲಿ ಹಿರಿಯ ಕಾರ್ಯಕರ್ತರಾದ ಕಾನತ್ತಿಲ್ ಕಣ್ಣನ್, ರಾಮಪ್ಪ ಮಂಜೇಶ್ವರ , ಹರೀಶ್ ಪೆರ್ಣಡ್ಕ ಹಾಗೂ ಪರಿಶಿಷ್ಟ ಜಾತಿ, ಪಂಗಡಗಳ ಜನಪ್ರತಿನಿಧಿಗಳನ್ನು ಅಭಿನಂದಿಸಲಾಯಿತು. ಮದೂರು ಪಂಚಾಯತಿ ಸದಸ್ಯ ಉದಯಕುಮಾರ್ ಸ್ವಾಗತಿಸಿ, ಎಸ್ ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾರಾಯಣ ಪಿ ಪೆರಡಾಲ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.