ಉಪ್ಪಳ: ಪೈವಳಿಕೆನಗರ ಸರ್ಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು. ಶಾಲಾ ಪ್ರಾಂಶುಪಾಲ ದಿವಾಕರನ್ ಧ್ವಜಾರೋಹಣ ನಡೆಸಿ ಸಂದೇಶ ನೀಡಿದರು. ಪೈವಳಿಕೆ ಗ್ರಾಮಪಂಚಾಯತಿ ಸದಸ್ಯೆ ಸುನಿತ ವಾಲ್ಟಿ ಡಿಸೋಜ ಮುಖ್ಯ ಅತಿಥಿಯಾಗಿದ್ದರು. ಎಸ್ ಎಸ್ ಎಲ್ ಸಿ ಮತ್ತು ಪ್ಲಸ್ ಟು ಪರೀಕ್ಷೆಗಳಲ್ಲಿ ಎ ಪ್ಲಸ್ ಗ್ರೇಡ್ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮುಖ್ಯೋಪಾಧ್ಯಾಯ ಇಬ್ರಾಹಿಂ ಬುಡ್ರಿಯ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಇಬ್ರಾಹಿಂ ಪಾವಲುಕೋಡಿ, ರಮೇಶ್ ಪೈವಳಿಕೆ, ಶಶಿಕಾಂತ್ ಬಲ್ಲಾಳ್, ಕೆ ಎಂ ಬಲ್ಲಾಳ್, ವಿಶ್ವನಾಥ ಕೆ, ರವೀಂದ್ರನಾಥ ಕೆ ಆರ್, ಸತೀಶ್ ಅರಮಂಗಿಲ, ಅಬ್ದುಲ್ ಲತೀಫ್ ಕೊಕ್ಕೆಜಾಲ್ ಉಪಸ್ಥಿತರಿದ್ದರು.