ಕಾಸರಗೋಡು: ಕಾಸರಗೋಡಿನ ನೂತನ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ಅವರಿಗೆ ಸೋಮವಾರ ಕೇರಳ ತುಳು ಅಕಾಡೆಮಿ ವತಿಯಿಂದ ಗೌರವಾರ್ಪಣೆ ಜರುಗಿತು. ಅಕಾಡೆಮಿ ಅಧ್ಯಕ್ಷ ಉಮೇಶ್ ಎಂ.ಸಾಲಿಯಾನ್ ಗೌರವಾರ್ಪಣೆ ಮಾಡಿದರು. ಕಾರ್ಯದರ್ಶಿ ಪ್ರದೀಪ್ ಕುಮಾರ್ ಬಿ., ಕಾರ್ಯಕಾರಿ ಸಮಿತಿ ಸದಸ್ಯ ಗೀತಾ ಸಾಮಾನಿ ಜತೆಗಿದ್ದರು. ಜಿಲ್ಲಾಧಿಕಾರಿ ಅವರು ಕೇರಳ ತುಳು ಅಕಾಡೆಮಿಯ ಕೋಶಾಧಿಕಾರಿಯಾಗಿದ್ದಾರೆ.