HEALTH TIPS

ಕೆಪಿಎಸ್‍ಟಿಎ ಕುಂಬಳೆ ಉಪಜಿಲ್ಲಾ ಸಮಿತಿಯ ವತಿಯಿಂದ ಬದಿಯಡ್ಕ ಸಮುದಾಯ ಆರೋಗ್ಯ ಕೇಂದ್ರಕ್ಕೆ ವಾಟರ್ ಪ್ಯೂರಿಫೈಯರ್ ಯಂತ್ರ ಹಸ್ತಾಂತರ:

  

              ಬದಿಯಡ್ಕ: ಶಿಕ್ಷಕ ಸಂಘಟನೆಯಾದ  ಕೇರಳ ಪ್ರದೇಶ್ ಸ್ಕೂಲ್ ಟೀಚರ್ ಅಸೋಸಿಯೇಷನ್ ಕುಂಬಳೆ ಉಪಜಿಲ್ಲಾ ಸಮಿತಿಯ ವತಿಯಿಂದ ಗುರು ಸ್ಪಶರ್ಂ=2 ಕಾರುಣ್ಯ ಚಟುವಟಿಕೆಯ ಭಾಗವಾಗಿ ಬದಿಯಡ್ಕ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಿನನಿತ್ಯ ಬರುವ ರೋಗಿಗಳು ಮತ್ತು ವ್ಯಾಕ್ಸಿನೇಷನ್ ಪಡೆಯಲು ಬರುವ ಜನರಿಗೆ ಶುದ್ಧನೀರಿನ ಅವಶ್ಯಕತೆ  ಮನಗಂಡು ಅಸೋಸಿಯೇಷನ್ ಕುಂಬಳೆ ಉಪಜಿಲ್ಲಾ ಸಮಿತಿ ಯ ವತಿಯಿಂದ ವಾಟರ್ ಪ್ಯೂರಿಫೈಯರ್ ಆರೋಗ್ಯ ಕೇಂದ್ರಕ್ಕೆ ಹಸ್ತಾಂತರಿಸಲಾಯಿತು.

            ಸಭಾಕಾರ್ಯಕ್ರಮವನ್ನು ಕೆಪಿಎಸ್‍ಟಿಎ ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಮಾಸ್ತರ್ ಉದ್ಘಾಟಿಸಿದರು. ಕುಂಬಳೆ ಉಪ ಜಿಲ್ಲಾಧ್ಯಕ್ಷೆ ಜಲಜಾಕ್ಷಿ ಟೀಚರ್ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಕೇಂದ್ರದ ವೈದ್ಯ ರಾಹುಲ್, ಆರೋಗ್ಯಧಿಕಾರಿ ದೇವಿದಾಕ್ಷನ್, ಸರೋಜಿನಿ,ಸಂಘಟನೆಯ ಕಾಸರಗೋಡು ವಿದ್ಯಾಭ್ಯಾಸ ಜಿಲ್ಲಾ ಕಾರ್ಯದರ್ಶಿ ಗೋಪಾಲ ಮಾಸ್ತರ್, ಪದಾಧಿಕಾರಿಗಳಾದ ಶರತ್ ಚಂದ್ರ ಶೆಟ್ಟಿ ಬಿನೊಯ್ ಮಾಸ್ತರ್, ಆರೋಗ್ಯ ಕಾರ್ಯಕರ್ತರು ಉಪಸ್ಥಿತರಿದ್ದರು. ಕಾರ್ಯದರ್ಶಿ ರಾಧಾಕೃಷ್ಣನ್ ಮಾಸ್ತರ್ ಸ್ವಾಗತಿಸಿ, ಕೋಶಧಿಕಾರಿ ನಿರಂಜನ್ ರೈ ಪೆರಡಾಲ ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries