ಕಳೆದ ಕೆಲವು ವಾರಗಳಿಂದ ಸಮರಸ ಸುದ್ದಿಯ ಅನೇಕ ಓದುವರು ಕೋಪ ಮಾಡಿಕೊಂಡಿದ್ದಾರೆ. ಕಾರಣ ನ್ಯೂಸ್ ಏನೋ ಕೊಡ್ತೀರಿ. ಆದರೆ ಭಾನುವಾರದ ಸಂಡೇ ಟಾಕ್ ಯಾಕೆ ನಿಲ್ಲಿಸಿದಿರಿ. ಸಮಸ್ಯೆ ಏನು ಎಂದು ಕೇಳಿದವರ ಸಂಖ್ಯೆ ಸಾವಿರಕ್ಕಿಂತ ಮೇಲೆ!. ಆದ್ದರಿಂದ ಚಹಾಕ್ಕೆ ಸಾವಿಲ್ಲ ಎಂದೇ ಭಾವಿಸುವೆ.
ಯಬಾ......ಏನ್ ಸಾರ್..........ಈ ಕೋವಿಡ್ ಬಿಟ್ಟೋಗೋದು ಬಿಡಿ.......ಜಟಿಲಗೊಳ್ಳುತ್ತಿರುವುದು ಕಾಣಿಸುತ್ತಿದೆ. ಜನರ ಆಗ್ರಹದಂತೆ ಸರ್ಕಾರಗಳು ಕೋವಿಡ್ ನಿಯಂತ್ರಣಗಳನ್ನು ಹಂತಾನುಹಂತದಲ್ಲಿ ಹಿಂತೆಗೆದುಕೊಂಡಂತೆ ಜನರ ಸಂಚಾರ ಸಲೀಸುಗೊಂಡಿತು, ನೋಡಿ. ಇನ್ನಿರುವುದು ಸವಾಲುಗಳು. ಜಾಗ್ರತೆಗಳು ಕೈಮೀರಿದರೆ......ಕೆರಳದಲ್ಲಿ ಅದೇ ಆಗಿದೆ ಎಂದೆನಿಸುತ್ತದೆ.
ವ್ಯಾಕ್ಸಿನ್ ವಿಷಯದಲ್ಲಿ ರಾಜ್ಯದಲ್ಲಿ ಗೊಂದಲಗಳು ಇನ್ನೂ ಮುಂದುವರಿದಿದೆ. ಸರಿಯಾಗಿ ಎಲ್ಲೂ ಲಸಿಕೆ ವಿತರಣೆಯಾಗದಿರುವುದಕ್ಕೆ ಸ್ಪಷ್ಟ ಉತ್ತರಗಳು ಯಾರಿಂದಲೂ ಲಭ್ಯವಾಗುತ್ತಿಲ್ಲ. ಹೋಗ್ಲಿ ಬಿಡಿ ನಾವು ನೀವು ಏನ್ ಮಾಡೋಣ.........ಬನ್ನಿ .....................ಚಾ.......
ಟೀಯನ್ನು ಮತ್ತೊಮ್ಮೆ ಬಿಸಿಮಾಡಿ ಕುಡಿದರೆ ಆರೋಗ್ಯ ಜೋಕೆ!
ನಮ್ಮಲ್ಲಿ ಹೆಚ್ಚಿನವರು ಚಹಾಪ್ರಿಯರು. ಬೆಳಗ್ಗೆ ಎದ್ದಾಗಿನಿಂದ, ರಾತ್ರಿ ಮಲಗುವವರೆಗೂ ಟೀಯನ್ನು ಎಷ್ಟು ಬಾರಿ ಕುಡಿಯುತ್ತಾರೋ, ಅವರಿಗೆ ತಿಳಿದಿರುವುದಿಲ್ಲ. ಅಷ್ಟು ಈ ಚಹಾಕ್ಕೆ ಅಂಟಿಕೊಂಡಿರುತ್ತಾರೆ. ಆದರೆ, ಕೆಲವು ಸೋಮಾರಿಗಳು ಒಮ್ಮೆ ಮಾಡಿಟ್ಟ ಚಹಾವನ್ನು ಪದೇ ಪದೇ ಬಿಸಿ ಮಾಡಿ ಕುಡಿಯುತ್ತಾರೆ.
ಟೀಯನ್ನು ಬಿಸಿ ಇದ್ದಾಗಲೇ ಕುಡಿಯುವುದು ಆರೋಗ್ಯಕರ, ಅದನ್ನು ಪುನಃ ಬಿಸಿಮಾಡುವುದು ಹಾನಿಕಾರಕ ಎಂದು ಅನೇಕ ಸಂಶೋಧನೆಗಳಿಂದ ಸಾಬೀತಾಗಿದೆ. ಹೀಗೆ ಮತ್ತೊಮ್ಮೆ ಬಿಸಿ ಮಾಡಿ ಕುಡಿದರೆ ಏನಾಗುತ್ತದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ರುಚಿ ಮತ್ತು ವಾಸನೆ ನಷ್ಟ: ಚಹಾವನ್ನು ಪುನಃ ಬಿಸಿ ಮಾಡುವುದಿರಂದ ಆಗುವ ಮೊದಲ ಮತ್ತು ಪ್ರಮುಖವಾದ ಅನಾನುಕೂಲವೆಂದರೆ ನಮ್ಮನ್ನು ಕುಡಿಯುವಂತೆ ಆಕರ್ಷಿಸುವ ಟೀಯ ರುಚಿ ಮತ್ತು ಸುವಾಸನೆ ನಷ್ಟವಾಗುತ್ತದೆ. ಅಷ್ಟೇ ಅಲ್ಲ, ಮರು ಬಿಸಿ ಮಾಡುವುದರಿಂದ ಸಾಕಷ್ಟು ಪೌಷ್ಟಿಕಾಂಶದ ಗುಣಗಳು ನಾಶವಾಗಿ, ರುಚಿ ಕಳೆದುಕೊಳ್ಳುವುದು. ಆದ್ದರಿಂದ ಟೀಯನ್ನು ಬಿಸಿ ಇದ್ದಾಗಲೇ, ಕುಡಿಯಬೇಕು. ಆಗಲೇ, ಅದರ ನಿಜವಾದ ರುಚಿ ಹಾಗೂ ಪರಿಮಳವನ್ನು ಆಸ್ವಾದಿಸಲು ಸಾಧ್ಯವಾಗುವುದು.
ಸೂಕ್ಷ್ಮಜೀವಿಯ ಬೆಳವಣಿಗೆ: ಕೆಲವರು ಬೆಳಗ್ಗೆ ಮಾಡಿಟ್ಟ ಚಹಾವನ್ನು ಮಧ್ಯಾಹ್ನದ ವೇಳೆ ಬಿಸಿ ಮಾಡಿ ಕುಡಿಯುವ ಅಭ್ಯಾಸ ಹೊಂದಿರುತ್ತಾರೆ. ನೀವೇನಾದರೂ ಚಹಾವನ್ನು 4 ಗಂಟೆಗಳ ಕಾಲ ಬಿಟ್ಟು ನಂತರ ಮತ್ತೆ ಕಾಯಿಸಿ ಕುಡಿಯುವ ಅಭ್ಯಾಸ ಹೊಂದಿದ್ದರೆ, ತಕ್ಷಣ ನಿಲ್ಲಿಸಬೇಕು. ಉಳಿದಿರುವ ಚಹಾದಲ್ಲಿ ಬ್ಯಾಕ್ಟೀರಿಯಾದಂತಹ ಸೂಕ್ಷ್ಮಜೀವಿಗಳು ಉಗಮಗೊಳ್ಳುತ್ತವೆ. ಇದು ನಿಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತವೆ. ಒಂದು ಗಿಡಮೂಲಿಕೆಗಳ ಚಹಾವನ್ನು ಹೀಗೆ ತುಂಬಾ ಸಮಯದವರೆಗೆ ಬಿಟ್ಟು, ಮತ್ತೆ ಬಿಸಿಮಾಡುವುದರಿಂದ, ಎಲ್ಲಾ ಪೋಷಕಾಂಶಗಳು ಮತ್ತು ಖನಿಜಗಳು ಕಳೆದುಹೋಗುತ್ತವೆ. ಇದಲ್ಲದೆ, ಟೀಯಲ್ಲಿರುವ ಇತರ ಸಂಯುಕ್ತಗಳಿಗೆ ಎರಡೆರಡು ಬಾರಿ ಶಾಖ ನೀಡುವುದರಿಂದ ನಾಶವಾಗುತ್ತವೆ.
ಅನಾರೋಗ್ಯಕ್ಕೆ ಕಾರಣವಾಗಬಹುದು: ಎರಡನೇ ಬಾರಿ ಬಿಸಿ ಮಾಡಿದ ಚಹಾವನ್ನು ಕುಡಿಯುವುದು ತುಂಬಾ ಅಪಾಯಕಾರಿ, ಏಕೆಂದರೆ ಅದನ್ನು ಮತ್ತೆ ಬಿಸಿ ಮಾಡಿದಾಗ ಎಲ್ಲಾ ಖನಿಜಗಳು ಮತ್ತು ಉತ್ತಮ ಸಂಯುಕ್ತಗಳು ನಷ್ಟವಾಗಿರುತ್ತವೆ, ಹೀಗಾಗಿ ಇದನ್ನು ಕುಡಿಯುವುದು ಅಪಾಯಕಾರಿ. ಇದು ಹೊಟ್ಟೆನೋವು, ಅತಿಸಾರ, ಉರಿಯೂತ, ವಾಕರಿಕೆ ಮುಂತಾದ ಪ್ರಮುಖ ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದು ಕೆಲವೊಮ್ಮೆ ದೀರ್ಘಕಾಲದ ಅನಾರೋಗ್ಯಕ್ಕೂ ದಾರಿಯಾಗುತ್ತದೆ.