ಕೊಚ್ಚಿ: ಪಾಪ್ಯುಲರ್ ಪೈನಾನ್ಸ್ ಹಣಕಾಸು ವಂಚನೆ ಪ್ರಕರಣದಲ್ಲಿ ಮಾಲೀಕ ಥಾಮಸ್ ಡೇನಿಯಲ್ ಮತ್ತು ಅವರ ಮಗಳು ಮತ್ತು ಕಂಪನಿಯ ಸಿಇಒ ರಿನು ಮರಿಯಮ್ ಅವರನ್ನು ಬಂಧಿಸಲಾಗಿದೆ. ಜಾರಿ ನಿರ್ದೇಶನಾಲಯ ಇಬ್ಬರ ಬಂಧನವನ್ನು ದಾಖಲಿಸಿದೆ. ಪ್ರಕರಣದಲ್ಲಿ ವಿಚಾರಣೆಗೆ ಕರೆಸಿ ನಂತರ ಇಬ್ಬರ ಬಂಧನವನ್ನು ದಾಖಲಿಸಲಾಗಿದೆ.
ಥಾಮಸ್ ಡೇನಿಯಲ್ ಮತ್ತು ಅವರ ಕುಟುಂಬವು 1600 ಕೋಟಿ ರೂ. ಭಾರೀ ಮೊತ್ತವನ್ನು ಗ್ರಾಹಕರಿಗೆ ವಂಚಿಸಿದೆ. ಘಟನೆಯಲ್ಲಿ ಆರ್ಥಿಕ ಅಕ್ರಮಗಳು ಮತ್ತು ಬೇನಾಮಿ ವಹಿವಾಟುಗಳ ಕುರಿತು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಡೇನಿಯಲ್ ಮತ್ತು ರಿನು ಜೊತೆಗೆ, ಅವರ ಪತ್ನಿ ಪ್ರಭಾ ಮತ್ತು ಇನ್ನಿಬ್ಬರು ಹೆಣ್ಣು ಮಕ್ಕಳನ್ನು ಇಡಿ ತನಿಖೆ ನಡೆಸುತ್ತಿದೆ.
ಇಬ್ಬರನ್ನೂ ಮಂಗಳವಾರ ಮಧ್ಯಾಹ್ನ ಎರ್ನಾಕುಳಂ ಸಿಜೆಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.