ಕಾಸರಗೋಡು: ಭಾರತ್ ಸ್ಕೌಟ್ಸ್ ಏಂಡ್ ಗೈಡ್ಸ್‍ನ ಕಸರಗೋಡು ಜಿಲ್ಲೆಯ ಚಂದ್ರಗಿರಿ ರೋವರ್ಸ್ ಏಂಡ್ ರೇಂಜರ್ಸ್ ವತಿಯಿಂದ ಸ್ಕಾರ್ಫ್‍ಡೇ ಆಚರಿಸಲಾಯಿತು. ಕಾಸರಗೋಡು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್‍ವೀರ್‍ಚಂದ್ ಅವರಿಗೆ ಸ್ಕಾರ್ಫ್ ತೊಡಿಸಿ, ಮರವಾಗಿ ಬೆಳೆಯಬಲ್ಲ ಸಸಿಗಳನ್ನು ನೀಡುವ ಮೂಲಕ ಉದ್ಘಾಟಿಸಲಾಯಿತು.
ಜಿಲ್ಲಾಧಿಕಾರಿಗೆ ಸ್ನೇಹಪೂರ್ವಕವಾಗಿ ನೀಡಿದ ಲಕ್ಷ್ಮೀತರು ಸಸಿಗಳನ್ನು ಸಿವಿಲ್‍ಸ್ಟೇಶನ್ ವಠಾರದಲ್ಲಿ ಜಿಲ್ಲಾಧಿಕಾರಿ ನೆಟ್ಟು ನೀರುಣಿಸಿದರು. ಜಿಲ್ಲಾಧಿಕಾರಿ ಕಚೇರಿ ಸ್ಟಾಫ್ ಕೌನ್ಸಿಲ್ ಸೆಕ್ರೆಟರಿ ಪಿ. ಪ್ರಭಾಕರನ್ ಮುಖ್ಯ ಭಾಷಣ ಮಾಡಿದರು. ರೋವರ್ ವಿಭಾಗ ಜಿಲ್ಲಾ ಕೇಂದ್ರಸ್ಥಾನ ಆಯುಕ್ತ ಅಜಿತ್ ಸಿ. ಕಳ್ನಾಡ್, ರೋವರ್ ಲೀಡರ್ ಶಿಜಿತ್ ಆರ್. ಕಳ್ನಾಡ್, ರೇಂಜರ್ಸ್ ಲೀಡರ್ ಮಿನಿಭಾಸ್ಕರನ್, ತಂಗಮಣಿ ರಾಮಕೃಷ್ಣನ್, ರಂಜಿನಿಸುರೇಶ್ ಉಪಸ್ಥಿತರಿದ್ದರು.