ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿಯ ಕೃಷಿ ಭವನದ ನೇತೃತ್ವದಲ್ಲಿ ಕೃಷಿ ದಿನಾಚರಣೆ ನಡೆಯಿತು. ಕೋವಿಡ್ ಮಾನದಂಡದ ಪ್ರಕಾರ ಕೃಷಿ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಎಣ್ಮಕಜೆ ಪಂಚಾಯತಿ ಅಧ್ಯಕ್ಷ ಸೋಮಶೇಖರ ಜೆ ಎಸ್.ಉದ್ಘಾಟಿಸಿದರು. ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್ .ಗಾಂಭೀರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಅಧಿಕಾರಿ ವಿನೀತ್ ವಿ.ವರ್ಮ. ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಎಣ್ಮಕಜೆ ಪಂಚಾಯತ್‍ನ ಅತ್ಯುತ್ತಮ ಕೃಷಿಕರಾದ ಪುರುಷೋತ್ತಮ ನಾಯಕ್ ಸೇರಾಜೆ, ಕೃಷ್ಣ ಮಡಿವಾಳ ಬೋಳುಬೈಲು, ನಾರಾಯಣ ನಾಯ್ಕ್ ಕೂರ್ಲುಗಯ, ಶ್ರೀಧರ ಎ. ಕಾಟುಕುಕ್ಕೆ, ಶಶಿಕಲಾ ರೈ, ಪೂವನಡ್ಕ ಹಾಗೂ ಕೃಷಿ ಕಾರ್ಮಿಕರಾದ ಕೃಷ್ಣ ಮೂಲ್ಯ ಖಂಡಿಗೆ,ಕೃಷ್ಣ ನಾಯಕ್, ಪಾಂಡಿಗಯ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಪಂಚಾಯತಿ ಸದಸ್ಯ ನಾರಾಯಣ ನಾಯ್ಕ್, ಆರೋಗ್ಯ- ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಎ.ಕುಲಾಲ್,ಕ್ಷೇಮ ಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸೌದಾಭಿ ಹನೀಫ್ , ಪಂ.ಸದಸ್ಯರು, ಕೃಷಿಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ಹಿರಿಯ ಕೃಷಿ ಸಹಾಯಕ ಮುರಳೀಧರನ್ ನಾಯರ್ ವಂದಿಸಿದರು.