HEALTH TIPS

ಉಪ್ಪು ಅಡುಗೆಗೆ ಮಾತ್ರವಲ್ಲ, ಸೌಂದರ್ಯ ಸಮಸ್ಯೆಗೂ ಬಳಸಬಹುದು! ಹೇಗೆ ಇಲ್ಲಿದೆ ನೋಡಿ..

                     ಉಪ್ಪು, ಒಂದು ಪ್ರಮುಖ ನೈಸರ್ಗಿಕ ಪದಾರ್ಥವಾಗಿದ್ದು, ಇದಿಲ್ಲದೇ, ಆಹಾರಕ್ಕೆ ಯಾವುದೇ ಬೆಲೆಯಿಲ್ಲ. ಏಕೆಂದರೆ, ಉಪ್ಪಿನ ರುಚಿ ಬೇರೆ ಏನೇ ಹಾಕಿದರೂ ಸರಿತೂಗುವಂತದ್ದಲ್ಲ. ಇಂತಹ ಉಪ್ಪು ಆರೋಗ್ಯದ ವಿಚಾರಕ್ಕೆ ಬಂದರೆ, ಅಧಿಕ ರಕ್ತದೊತ್ತಡ, ಹೃದಯ ಸಮಸ್ಯೆಗಳೊಂದಿಗೆ ತಳುಕುಹಾಕಿಕೊಂಡಿದ್ದರೂ, ಇದರಿಂದ ಸೌಂದರ್ಯಕ್ಕೆ ಲಾಭಗಳಿವೆ ಎಂಬುದನ್ನು ತಳ್ಳಿಹಾಕುವಂತಲ್ಲ.


 

              ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಸೋಡಿಯಂನಂತಹ ಹಲವಾರು ಖನಿಜಗಳಿಂದ ತುಂಬಿರುವ ಉಪ್ಪು ನಿಮ್ಮ ತ್ವಚೆಯ ಮೇಲೆ ಅದ್ಭುತಗಳನ್ನು ಮಾಡಬಹುದು. ಅದು ಹೇಗೆ ಎಂಬುದನ್ನು ನೋಡಲು ಈ ಕೆಳಗೆ ಸ್ಕ್ರೋಲ್ ಮಾಡಿ.


              ಬಾಡಿ ಸ್ಕ್ರಬ್: ಉಪ್ಪು ನೈಸರ್ಗಿಕ ಎಫ್ಫೋಲಿಯೇಟರ್ ಆಗಿದ್ದು, ಚರ್ಮದಲ್ಲಿರುವ ಡೆಡ್ ಸೆಲ್ ಗಳನ್ನು ಗೆದುಹಾಕಿ, ನಯವಾದ, ಫ್ರೆಶ್ ಸ್ಕಿನ್ ಅನ್ನು ನೀಡುವುದು. ಇದರಲ್ಲಿರುವ ಖನಿಜಗಳು ನಿಮ್ಮ ಚರ್ಮವನ್ನು ಮೃದುಗೊಳಿಸಿ, ಹೊಳೆಯುವ ತ್ವಚೆಯನ್ನು ನೀಡುತ್ತದೆ. ಅಷ್ಟೇ ಅಲ್ಲ, ನಿಮ್ಮ ಚರ್ಮದಲ್ಲಿರುವ ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕಿ, ಮೊಡವೆಗಳಿಂದ ದೂರವಿರಿಸುತ್ತದೆ. ಇದಕ್ಕಾಗಿ ಅರ್ಧ ಕಪ್ ಉಪ್ಪನ್ನು ಅರ್ಧ ಕಪ್ ಆಲಿವ್ ಎಣ್ಣೆಯೊಂದಿಗೆ ಬೆರೆಸಿ ನಿಮ್ಮ ಬಾಡಿಗೆ ಹಚ್ಚಿ. ಡೆಡ್ ಸೆಲ್ ತೆಗೆಯಲು ನಿಧಾನವಾಗಿ ಮಸಾಜ್ ಮಾಡಿ ಮತ್ತು ತೊಳೆಯಿರಿ.
              ಮುಖದ ಟೋನರ್ : ನಿಮ್ಮ ರಂಧ್ರಗಳನ್ನು ಆಳವಾಗಿ ಸ್ವಚ್ಛಗೊಳಿಸುವ ಮೂಲಕ, ಉಪ್ಪು ಸ್ವಚ್ಛ ಹಾಗೂ ಮೃದುವಾದ ತ್ವಚೆಯನ್ನು ಬಹಿರಂಗ ಪಡಿಸುತ್ತದೆ. ಜೊತೆಗೆ ನಿಮ್ಮ ತ್ವಚೆಯ ಚರ್ಮವು ಮುಕ್ತವಾಗಿ ಉಸಿರಾಡಲು ಸಹಾಯ ಮಾಡುತ್ತದೆ. ಇದಕ್ಕಾಗಿ ಕೇವಲ ಒಂದು ಚಮಚ ಉಪ್ಪನ್ನು ಅರ್ಧ ಕಪ್ ಬೆಚ್ಚಗಿನ ನೀರಿನೊಂದಿಗೆ ಬೆರೆಸಿ, ಹತ್ತಿ ಉಂಡೆಯನ್ನು ಬಳಸಿ ನಿಮ್ಮ ಮುಖಕ್ಕೆ ಹಚ್ಚಿ. 15 ನಿಮಿಷಗಳ ಕಾಲ ಹಾಗೆ ಬಿಡಿ ನಂತರ ತೊಳೆಯಿರಿ.


             ಚರ್ಮದ ಡಿಟಾಕ್ಸ್: ಉಪ್ಪಿನಲ್ಲಿ ಹೀರಿಕೊಳ್ಳುವ ಗುಣ ಉತ್ತಮವಾಗಿರುವ ಕಾರಣ, ಇದು ನೈಸರ್ಗಿಕ ಡಿಟಾಕ್ಸಿಫೈಯರ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಚರ್ಮದಿಂದ ಹಾನಿಕಾರಕ ಜೀವಾಣು ಮತ್ತು ಬ್ಯಾಕ್ಟೀರಿಯಾವನ್ನು ಹೀರಿ, ಹೊಳೆಯುವ ಚರ್ಮವನ್ನು ಉಡುಗೊರೆಯಾಗಿ ನೀಡುತ್ತದೆ. ಇದಕ್ಕಾಗಿ, ಮುಖವನ್ನು ಒದ್ದೆಮಾಡಿ, ಅದರ ಮೇಲೆ ಉಪ್ಪಿನ ತೆಳುವಾದ ಪದರವನ್ನು ಹಚ್ಚಿ. ಒಣಗುವವರೆಗೂ ಬಿಡಿ, ಅದು ಒಣಗಿದಾಗ, ಉಪ್ಪು ಚರ್ಮದಿಂದ ವಿಷವನ್ನು ಹೀರಿಕೊಂಡಿರುತ್ತದೆ.
            ಫೇಸ್ ಮಾಸ್ಕ್: ಇದು ತ್ವಚೆಯಲ್ಲಿರುವ ಹೆಚ್ಚುವರಿ ಎಣ್ಣೆಯನ್ನು ಹೊರಹಾಕುವುದಲ್ಲದೆ, ಚರ್ಮವನ್ನು ಹೈಡ್ರೇಟ್ ಮಾಡಿ ಪೋಷಿಸುತ್ತದೆ. ಫೇಸ್ ಮಾಸ್ಕ್ ಗಳಲ್ಲಿ ಉಪ್ಪನ್ನು ಬಳಸುವುದರಿಂದ ನಿಮ್ಮ ಚರ್ಮದ ತೈಲ ಉತ್ಪಾದನೆ ಮತ್ತು ತೇವಾಂಶವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಈ ಮಾಸ್ಕ್ ತಯಾರಿಸಲು, ನೀವು ಎರಡು ಚಮಚ ಉಪ್ಪನ್ನು ನಾಲ್ಕು ಚಮಚ ಜೇನುತುಪ್ಪದೊಂದಿಗೆ ಸರಿಯಾಗಿ ಬೆರೆಸಬೇಕು. ಈ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಿ, 15 ನಿಮಿಷಗಳ ಕಾಲ ಬಿಡಿ, ನಂತರ ನಿಮ್ಮ ಮುಖದ ಮೇಲೆ 30 ಸೆಕೆಂಡುಗಳ ಕಾಲ ಒದ್ದೆಯಾದ ಬಟ್ಟೆಯನ್ನು ಹಾಕಿ. ಇದರ ನಂತರ, ನಿಮ್ಮ ಬೆರಳುಗಳ ಸಹಾಯದಿಂದ ನಿಧಾನವಾಗಿ ಮಸಾಜ್ ಮಾಡಿ, ಎಫ್ಫೋಲಿಯೇಟ್ ಮಾಡಿ ಮತ್ತು ತೊಳೆಯಿರಿ.
                    ಸ್ನಾನಕ್ಕೆ ಉಪ್ಪು: ಉಪ್ಪಿನ ಇನ್ನೊಂದು ಪ್ರಯೋಜನವೆಂದರೆ ಇದನ್ನು ಸ್ನಾನದ ಉಪ್ಪಾಗಿ ಬಳಸಬಹುದು. ನಿಮ್ಮ ಸ್ನಾನದ ನೀರಿನಲ್ಲಿ ಸಮುದ್ರದ ಉಪ್ಪನ್ನು ಸೇರಿಸಿ ಏಕೆಂದರೆ ಅದು ದೇಹದಿಂದ ಕೊಳಕು, ಬೆವರು ಮತ್ತು ವಿಷವನ್ನು ಹೀರಿಕೊಳ್ಳುತ್ತದೆ, ಚರ್ಮವನ್ನು ಶುದ್ಧಗೊಳಿಸುತ್ತದೆ.




Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries