HEALTH TIPS

ಕಾಸರಗೋಡು ಜಿಲ್ಲೆಯಲ್ಲಿ ಯಶಸ್ವಿಯಾಗಿ ಮುನ್ನಡೆ ಸಾಧಿಸುತ್ತಿರುವ ಮನೆಮನೆಗಳಲ್ಲಿ ಯಕ್ಷಗಾನ ಅಭಿಯಾನ : ದೇವಕಾನದಲ್ಲಿ ರಂಜಿಸಿದ ಯಕ್ಷಾರಾಧನೆ

         

             ಉಪ್ಪಳ: ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಮತ್ತು ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಅವರ ದಿವ್ಯಾಶೀರ್ವಾದದೊಂದಿಗೆ ಆರಂಭಿಸಲಾದ ಮನೆಮನೆಗಳಲ್ಲಿ ಯಕ್ಷಗಾನ ಅಭಿಯಾನ ಯಶಸ್ವಿಯಾಗಿ ಕಾಸರಗೋಡು ಜಿಲ್ಲೆಯಲ್ಲಿ ಮುನ್ನಡೆ ಸಾಧಿಸುತ್ತಿದೆ. 

             ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಜಾನಪದ ಪರಿಷತ್ ಕೇರಳ ಗಡಿನಾಡ ಘಟಕ, ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಸಂಘದ ಸಹಭಾಗಿತ್ವದಲ್ಲಿ ಗಡಿನಾಡ ಯಕ್ಷಗಾನ ಅಕಾಡೆಮಿ ವತಿಯಿಂದ ಈ ಸರಣಿ ಜರುಗುತ್ತಿದೆ. ಯಕ್ಷಗುರು ಜಯರಾಮ ಪಾಟಾಳಿ ಪಡುಮಲೆ ಅವರ ನಿರ್ದೇಶನದಲ್ಲಿ ಮತ್ತು ಪತ್ರಕರ್ತ ಅಖಿಲೇಶ್ ನಗುಮುಗಂ ಅವರ ಸಂಚಾಲಕತ್ವದಲ್ಲಿ ಹಿಮ್ಮೆಳ-ಮುಮ್ಮೇಳಗಳಲ್ಲಿ ಪ್ರಬುದ್ಧ ಕಲಾವಿದರ ಜೊತೆಗೆ ಅಭಿಯಾನ ನಡೆಯುತ್ತಿದೆ.  

            ಪರ್ಯಟನೆಯ ಅಂಗವಾಗಿ ಪೈವಳಿಕೆ ಗ್ರಾಮ ಪಂಚಾಯತ್ ನ ದೇವಕಾನ ಶ್ರೀಕೃಷ್ಣ ಭಟ್ ಅವರ ನಿವಾಸದಲ್ಲಿ ಪ್ರದರ್ಶನ ಜರುಗಿತು. ಈ ಮನೆಯ ಹಿರಿಯರಾದ ದೇವಕಾನ ಕೃಷ್ಣಭಟ್ ಅವರು ಶಿಕ್ಷಕರಾಗಿ, ಯಕ್ಷಗಾನ ವೇಷಧಾರಿಯಾಗಿ, ಅರ್ಥಧಾರಿಯಾಗಿ, ಪ್ರಸಾದನ ವ್ಯವಸ್ಥಾಪಕರಾಗಿ, ಗಣೇಶ ಕಲಾವೃಂದ ಪೈವಳಿಕೆ ಸಂಸ್ಥೆಯ ಸಂಸ್ಥಾಪಕರಾಗಿ ಯಕ್ಷಗಾನ ವಲಯಕ್ಕೆ ನೀಡಿದ ಕೊಡುಗೆ ಅಪಾರವಾದುದು. ಅವರಿಗೆ ಶ್ರದ್ದಾಂಜಲಿ ರೂಪದಲ್ಲಿ ಈ ಕಲಾಪ್ರಸ್ತುತಿ ಜರುಗಿತು. "ವೀರ ಅಭಿಮನ್ಯು" ಪ್ರಸಂಗದ ಸುಭದ್ರೆ-ಅಭಿಮನ್ಯು ಅವರ ಸಂವಾದದ ದೃಶ್ಯವನ್ನು ಕಲಾವಿದರು ಈ ವೇಳೆ ಪ್ರಸ್ತುತಪಡಿಸಿದರು. 

         ಕಾರ್ಯಕ್ರಮಕ್ಕೆ ಪೆÇ್ರೀತ್ಸಾಹ ನೀಡಿದ ದೇವಕಾನ ಶ್ರೀಕೃಷ್ಣ ಭಟ್ ಮತ್ತು ಮನೆಮಂದಿಯನ್ನು ಅಭಿಯಾನ ತಂಡದ ಪರವಾಗಿ ಅಭಿನಂದಿಸಲಾಯಿತು. ಜನಪರ ನೇತಾರರಾದ ಹರೀಶ ಗೋಸಾಡ, ಕೀರ್ತನ್ ಗೋವಿಂದ್, ಪೆÇ್ರ.ಎ.ಶ್ರೀನಾಥ್ ಅಭಿನಂದನೆ ನಡೆಸಿದರು. ಡಾ.ರಾಜಾರಾಮ ದೇವಕಾನ, ವಿಕ್ರಂ ಮಯ್ಯ ಪೈವಳಿಕೆ, ಕಿರಣ್ ಕುದ್ರೆಕೋಡ್ಲು, ರಾಜೇಶ್ ಬಾಯಾರು, ಗಾಯಕ ವಸಂತ ಬಾರಡ್ಕ ಮೊದಲಾದವರು ಸಹಕರಿಸಿದರು. ಪತ್ರಕರ್ತ ವೀಜಿ ಕಾಸರಗೋಡು ಕಾರ್ಯಕ್ರಮದ ಸಮಗ್ರ ನಿರ್ವಹಣೆ ನಡೆಸಿದರು. ಜಯರಾಮ ಪಾಟಾಳಿ ಪಡುಮಲೆ ಮತ್ತು ಅಖಿಲೇಶ್ ನಗುಮುಗಂ ನೇತೃತ್ವ ವಹಿಸಿದ್ದರು. 


 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries