ಕೊಚ್ಚಿ: ಸರ್ಕಾರವು ಓಣಂ ಹಿನ್ನೆಲೆಯಲ್ಲಿ ಉಚಿತ ಕಿಟ್‍ಗಳನ್ನು ವಿತರಿಸುತ್ತಿದೆ. ಕಳೆದ ಶನಿವಾರದೊಳಗೆ ಕಿಟ್‍ಗಳ ವಿತರಣೆಯನ್ನು ಪೂರ್ಣಗೊಳಿಸಲು ಆದ್ಯತೆಯ ಹಳದಿ ಮತ್ತು ಗುಲಾಬಿ ಬಣ್ಣದ ಕಾರ್ಡುದಾರರಿಗೆ ಸರ್ಕಾರ ಸೂಚಿಸಿತ್ತು. ಈ ಎರಡು ವಿಭಾಗಗಳಲ್ಲಿ 35 ಲಕ್ಷ ಫಲಾನುಭವಿಗಳಿದ್ದಾರೆ ಎಂದು ಅಂದಾಜಿಸಲಾಗಿದೆ. ಆದರೆ ಇದುವರೆಗೆ ಕೇವಲ ಎಂಟು ಲಕ್ಷ ಕಿಟ್‍ಗಳನ್ನು ವಿತರಿಸಲಾಗಿದೆ.
ಪಡಿತರ ಅಂಗಡಿಗಳಿಗೆ ಸಾಕಷ್ಟು ಕಿಟ್ ಲಭ್ಯವಾಗದಿರುವುದರಿಂದ ಎಲ್ಲರಿಗೂ ಕಿಟ್ ಲಭಿಸುತ್ತಿಲ್ಲ ಎನ್ನಲಾಗಿದೆ. ಸರಕುಗಳ ಅಲಭ್ಯತೆ ಮತ್ತು ಪ್ಯಾಕಿಂಗ್ ವಿಳಂಬದಿಂದಾಗಿ ವಿಳಂಬವಾಗಿದೆ ಎಮದು ಅಧಿಕೃತರು ಸಮಜಾಯಿಷಿ ನೀಡಿದ್ದಾರೆ. ಈ ಕಿಟ್ ಆ. 18 ರ ಮೊದಲು ಎಲ್ಲಾ ಪಡಿತರ ಗ್ರಾಹಕರಿಗೂ ವಿತರಿಸಲಾಗುವುದು ಎಂದು ಸರ್ಕಾರ ಈ ಹಿಂದೆ ಘೋಷಿಸಿತ್ತು. ಪಚ್ಚೆ ಹೆಸರು, ನೆಲಗಡಲೆ ಮತ್ತು ಗೇರುಬೀಜದ ಲಭ್ಯತೆಯ ಕೊರತೆಯೂ ವಿಳಂಬಕ್ಕೆ ಕಾರಣ ಎಂದು ಸರ್ಕಾರವು ಉಲ್ಲೇಖಿಸಿದೆ.
ಈ ರೀತಿ ಅನಿಶ್ಚಿತತೆ ಮುಂದುವರಿದರೆ, ಈ ತಿಂಗಳ ಅಂತ್ಯದೊಳಗೆ ಆದ್ಯತೆಯ ಕಿಟ್‍ಗಳಿಗೂ ವಿತರಿಸಲಾಗುವುದಿಲ್ಲ ಎಂದು ಪಡಿತರ ಅಂಗಡಿಯವರು ಹೇಳುತ್ತಾರೆ. ಅಂಗಡಿಯವರು ಕಿಟ್‍ಗಳ ಸ್ವೀಕೃತಿಯ 10 ತಿಂಗಳ ಬಾಕಿಯನ್ನು ಕನಿಷ್ಠ ಓಣಂ ಅವಧಿಯಲ್ಲಿ ಪಾವತಿಸಬೇಕೆಂದು ವಿನಂತಿಸುತ್ತಾರೆ.