ಕಾಸರಗೋಡು: ಕರಿಂದಳಂ ತಲೆಯಡ್ಕಂ ಎಂಬಲ್ಲಿ ನಿರ್ಮಿಸಲಾಗುವ ಫಿಷ್ ಹಾಚರ್ ಗೆ ಶಿಲಾನ್ಯಾಸ, ಹಸುರು ದ್ವೀಪ ಮತ್ತು ಮೀನುಕೃಷಿಗೆ ಚಾಲನೆ ಸೋಮವಾರ ಜರುಗಿತು.
ರಾಜ್ಯ ಸರಕಾರದ ನೂರು ದಿನಗಳ ಕ್ರಿಯಾಯೋಜನೆ ಅಂಗವಾಗಿ ಕೇರಳ ಕ್ಲೇಸ್ ಆಂಡ್ ಮಿನರಲ್ಸ್ ಪ್ರಾಡಕ್ಟ್ ಸ್ ಲಿಮಿಟೆಡ್ ಸಂಸ್ಥೆಯ ವೈವಿಧ್ಯೀ ಕರಣ ಸಲುವಾಗಿ ಫಿಷ್ ಹಾಚರಿ ನಿರ್ಮಿಸಲಾಗುವುದು.
ಶಾಸಕ ಇ.ಚಂದ್ರಶೇಖರನ್ ಉದ್ಘಾಟಿಸಿದರು. ಕಿನಾನೂರು-ಕರಿಂದಳಂ ಗ್ರಾಮ ಪಂಚಾಯತ್ ಅಧ್ಯಕ್ಷ ಟಿ.ಕೆ.ರವಿ. ಕೆ.ಸಿ.ಎಂ.ಪಿ.ಎಲ್. ಆಡಳಿತ ನಿರ್ದೇಶಕ ಆನಕೈ ಬಾಲಕೃಷ್ಣನ್ ಮೊದಲಾದವರು ಉಪಸ್ಥಿತರಿದ್ದರು.