HEALTH TIPS

ಒಬಿಸಿ ಪಟ್ಟಿ ರೂಪಿಸುವ ಅಧಿಕಾರವನ್ನು ರಾಜ್ಯಗಳಿಗೆ ಮರಳಿಸುವ ಮಸೂದೆಗೆ ರಾಷ್ಟ್ರಪತಿಗಳ ಅಂಗೀಕಾರ

                 ನವದೆಹಲಿ:ಇತರ ಹಿಂದುಳಿದ ವರ್ಗಗಳ (ಒಬಿಸಿ) ತಮ್ಮದೇ ಆದ ಪಟ್ಟಿಗಳನ್ನು ತಯಾರಿಸಲು ರಾಜ್ಯ ಸರಕಾರಗಳಿಗೆ ಅಧಿಕಾರವನ್ನು ಮರಳಿಸುವ ಸಂವಿಧಾನ (105ನೇ ತಿದ್ದುಪಡಿ) ಕಾಯ್ದೆ 2021ಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ತಮ್ಮ ಅಂಗೀಕಾರವನ್ನು ನೀಡಿದ್ದಾರೆ. 

             ಈ ಶಾಸನವನ್ನು ಲೋಕಸಭೆ ಆ.10ರಂದು ಮತ್ತು ರಾಜ್ಯಸಭೆ ಆ.11ರಂದು ಅಂಗೀಕರಿಸಿದ್ದವು. ಅದನ್ನು ಸಂವಿಧಾನ (127ನೇ ತಿದ್ದುಪಡಿ) ಮಸೂದೆ ಎಂದು ಸಂಸತ್ತಿನಲ್ಲಿ ಮಂಡಿಸಲಾಗಿತ್ತಾದರೂ ನಂತರ ತಿದ್ದುಪಡಿಯ ಸಂಖ್ಯೆಯನ್ನು ಬದಲಿಸಲಾಗಿತ್ತು. ಈಗ ಕಾಯ್ದೆಯಾಗಿರುವ ಈ ಮಸೂದೆಯು ಭಾರತದಲ್ಲಿ ಒಬಿಸಿ ಪಟ್ಟಿಯನ್ನು ಅಧಿಸೂಚಿಸುವ ಅಧಿಕಾರವನ್ನು ಕೇಂದ್ರಕ್ಕೆ ಮಾತ್ರ ನೀಡಿದ್ದ ಸರ್ವೋಚ್ಚ ನ್ಯಾಯಾಲಯದ ಮೇ ತಿಂಗಳ ಆದೇಶವನ್ನು ಕಡೆಗಣಿಸಿದೆ.

ಲೋಕಸಭೆಯಲ್ಲಿ ಮಸೂದೆಯನ್ನು ಮಂಡಿಸಿದ್ದ ಸಂದರ್ಭ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ವೀರೇಂದ್ರ ಕುಮಾರ ಅವರು,ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ವರ್ಗಗಳ ಪಟ್ಟಿಯನ್ನು ಸಿದ್ಧಗೊಳಿಸಲು ಅಧಿಕಾರವನ್ನು ಹೊಂದಿವೆ ಎನ್ನುವುದನ್ನು ಸ್ಪಷ್ಟಪಡಿಸಲು ಸಂವಿಧಾನದ 342ಎ ವಿಧಿಯ ತಿದ್ದುಪಡಿ ಅಗತ್ಯವಾಗಿದೆ. ಅಲ್ಲದೇ ಭಾರತದ ಒಕ್ಕೂಟ ವ್ಯವಸ್ಥೆಯನ್ನು ಕಾಯ್ದುಕೊಳ್ಳಲು 338ಬಿ ಮತ್ತು 366ನೇ ವಿಧಿಗಳಿಗೂ ತಿದ್ದುಪಡಿಯನ್ನು ಮಾಡುವ ಅಗತ್ಯವಿದೆ ಎಂದು ತಿಳಿಸಿದ್ದರು.
           ನೂತನ ಕಾಯ್ದೆಯಂತೆ ರಾಷ್ಟ್ರಪತಿಗಳು ಕೇವಲ ಕೇಂದ್ರದ ಉದ್ದೇಶಗಳಿಗಾಗಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಪಟ್ಟಿಯನ್ನು ಅಧಿಸೂಚಿಸುವ ಅಧಿಕಾರವನ್ನು ಹೊಂದಿರುತ್ತಾರೆ. ಈ ಪಟ್ಟಿಯನ್ನು ಕೇಂದ್ರವು ಸಿದ್ಧಪಡಿಸಿ ತನ್ನ ಬಳಿಯಲ್ಲಿಯೇ ಇಟ್ಟುಕೊಳ್ಳುತ್ತದೆ ಹಾಗೂ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೂ ತಮ್ಮದೇ ಆದ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ವರ್ಗಗಳ ಪಟ್ಟಿಗಳನ್ನು ಸಿದ್ಧಪಡಿಸುತ್ತವೆ.

            ದೇಶಾದ್ಯಂತ ಜಾತಿಗಣತಿಯನ್ನು ನಡೆಸಬೇಕು ಎಂಬ ಹಲವಾರು ಪಕ್ಷಗಳ ಆಗ್ರಹಗಳ ನಡುವೆಯೇ ನೂತನ ಕಾಯ್ದೆಯು ಜಾರಿಗೆ ಬಂದಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries