ತಿರುವನಂತಪುರ: ಕೊರೊನಾ ಲಸಿಕೆಗೆ ಸಂಬಂಧಿಸಿದ ನಕಲಿ ಸುದ್ದಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ಸಾಂಕ್ರಾಮಿಕ ರೋಗಗಳ ತಡೆ ಕಾಯಿದೆಯಡಿ ಪ್ರಕರಣ ದಾಖಲಿಸಲಾಗುವುದು. ಈ ಘಟನೆಯ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಮಾಡಲು ಆರೋಗ್ಯ ಇಲಾಖೆಯು ಸೈಬರ್ ಸೆಲ್‍ಗೆ ದೂರು ನೀಡಿದೆ ಎಂದು ಅವರು ಹೇಳಿದರು.
ಸಾಂಕ್ರಾಮಿಕ ಅಸೌಖ್ಯದ ಸಂದರ್ಭ ನಕಲಿ ಸುದ್ದಿ ಹರಡುವುದು ಅಪರಾಧ. ಆರೋಗ್ಯ ಇಲಾಖೆಯ ಪ್ರತಿನಿಧಿ ಹೆಸರಿನಲ್ಲಿ ನಕಲಿ ಧ್ವನಿ ಸಂದೇಶವನ್ನು ವಾಟ್ಸಾಪ್‍ನಲ್ಲಿ ಹರಡಲಾಯಿತು. ಧ್ವನಿ ಸಂದೇಶದಲ್ಲಿ ಆರೋಗ್ಯ ಇಲಾಖೆಯ ವಿಶೇಷ ನಿರ್ದೇಶಕರಾದ ಗಂಗಾದಾತನ್ ಎಂದು ಪರಿಚಯಿಸಿಕೊಳ್ಳುವ ವ್ಯಕ್ತಿಯಿಂದ ಬಂದಿದೆ. ಎಲ್ಲಾ ಆಶಾ ಕಾರ್ಯಕರ್ತರು ಮತ್ತು ಆರೋಗ್ಯ ನಿರೀಕ್ಷಕರು ತಕ್ಷಣವೇ ಎಲ್ಲಾ ಗುಂಪುಗಳಿಗೆ ಹಂಚಿಕೊಳ್ಳಬೇಕು ಎಂದು ಹೇಳುವ ಮೂಲಕ ಧ್ವನಿ ಸಂದೇಶ ಆರಂಭವಾಗುತ್ತದೆ.
ಆರೋಗ್ಯ ಇಲಾಖೆಯಿಂದ ಅಂತಹ ಯಾವುದೇ ಸಂದೇಶ ನೀಡಲಾಗಿಲ್ಲ. ಮಾತ್ರವಲ್ಲ ಅಲ್ಲಿ ಹೇಳಿರುವುದು ಸಂಪೂರ್ಣ ತಪ್ಪು ಸಂದೇಶವಾಗಿದೆ. ಹಾಗಾಗಿ ಜನರು ಇದನ್ನು ನಂಬಬಾರದು ಎಂದು ಸಚಿವೆ ವೀಣಾ ಜಾರ್ಜ್ ಹೇಳಿರುವರು.