ತಿರುವನಂತಪುರಂ: ಮಂಗಳವಾರ ನಡೆದ ದೈನಂದಿನ ಕೋವಿಡ್ ಪರಿಶೀಲನಾ ಸಭೆಯಲ್ಲಿ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೋವಿಡ್ ಸಂಬಂಧ ರೋಗಿಗಳು ಮತ್ತು ಗರ್ಭಿಣಿಯರಿಗೆ ಲಸಿಕೆಯಲ್ಲಿ ಆದ್ಯತೆ ನೀಡಲು ಮತ್ತು ರಜಾದಿನಗಳಲ್ಲಿಯೂ ಲಸಿಕೆ ಹಾಕಲು ನಿರ್ದೇಶನ ನೀಡಿರುವರು.
ಲಸಿಕೆ ಕೊರತೆಯಾಗದಂತೆ ಮಧ್ಯಸ್ಥಿಕೆ ವಹಿಸುವಂತೆ ಆರೋಗ್ಯ ಇಲಾಖೆಗೆ ಸೂಚನೆ ನೀಡಿದರು. ಸ್ಥಳೀಯಾಡಳಿತ ಸಂಸ್ಥೆಗಳು, ವಾರ್ಡ್ ಕಮಿಟಿಗಳು ಮತ್ತು ಕ್ಷಿಪ್ರ ಪ್ರತಿಕ್ರಿಯೆ ತಂಡಗಳು ಕೋವಿಡ್ ಸೋಂಕಿಗೆ ಒಳಗಾದ ತಕ್ಷಣ ಸಂಬಂಧಿತ ರೋಗಗಳನ್ನು ಹೊಂದಿರುವವರನ್ನು ಆಸ್ಪತ್ರೆಗೆ ಸೇರಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಹೇಳಿದರು.
ಟೆಲಿಮೆಡಿಸಿನ್ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಲು ಸೂಚಿಸಿದರು. ಮಲ್ಲಪ್ಪಳ್ಳಿ, ಪತ್ತನಂತಿಟ್ಟದಲ್ಲಿ ಎರಡು ಡೋಸ್ ಲಸಿಕೆ ಪಡೆದ 124 ಜನರಿಗೆ ಕೋವಿಡ್ ಬಾಧಿಸಿರುವ ಪ್ರಕರಣವನ್ನು ಅಧ್ಯಯನ ಮಾಡಲು ಆರೋಗ್ಯ ಇಲಾಖೆ ಮತ್ತು ಆರೋಗ್ಯ ತಜ್ಞರ ಸಮಿತಿಗೆ ಮುಖ್ಯಮಂತ್ರಿ ಸೂಚಿಸಿದರು. ಆರಾನ್ಮುಳ ದೋಣಿ ಸ್ಪರ್ಧೆಗೆ ಸಂಬಂಧಿಸಿದಂತೆ ಕಳೆದ ಬಾರಿ ನೀಡಿದಷ್ಟೇ ರಿಯಾಯಿತಿಗಳನ್ನು ಮಾತ್ರ ನೀಡಬೇಕೆಂದು ಸಭೆಯಲ್ಲಿ ನಿರ್ಧರಿಸಲಾಯಿತು.