ನಾಗ್ಪುರ: ಪೈಲಟ್‌ಗೆ ಹೃದಯಾಘಾತ ಆದ ಪರಿಣಾಮ ಬಾಂಗ್ಲಾದೇಶದ ಬಿಮನ್ ಏರ್‌ಲೈನ್ಸ್‌ಗೆ ಸೇರಿದ ವಿಮಾನವೊಂದು ನಾಗ್ಪುರದಲ್ಲಿ ತುರ್ತು ಲ್ಯಾಂಡಿಂಗ್ ಆಗಿರುವ ಘಟನೆ ವರದಿಯಾಗಿದೆ.
ಮಸ್ಕತ್‌ನಿಂದ ಢಾಕಾಗೆ ಹೊರಟ ಬಾಂಗ್ಲಾದೇಶ ವಿಮಾನದ ಪೈಲಟ್‌ಗೆ ದಾರಿ ಮಧ್ಯೆ ಹೃದಯಾಘಾತ ಕಾಣಿಸಿಕೊಂಡಿದೆ. ಇದರಿಂದಾಗಿ ತುರ್ತು ಭೂಸ್ಪರ್ಶ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
126 ಪ್ರಯಾಣಿಕರನ್ನು ಹೊತ್ತ ಬೋಯಿಂಗ್ ವಿಮಾನ ಶುಕ್ರವಾರ ಬೆಳಗ್ಗೆ 11.40ರ ಹೊತ್ತಿಗೆ ನಾಗ್ಪುರದಲ್ಲಿ ಇಳಿದಿದೆ. ಬಳಿಕ ಪೈಲಟ್‌ರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ರಾಯಪುರ ಸಮೀಪದಲ್ಲಿದ್ದಾಗ ತುರ್ತು ಲ್ಯಾಂಡಿಂಗ್‌ಗಾಗಿ ಕೋಲ್ಕತ್ತಾ ಎಟಿಸಿಯನ್ನು ಸಂಪರ್ಕಿಸಲಾಗಿತ್ತು. ಬಳಿಕ ಹತ್ತಿರದ ನಾಗ್ಪುರ ವಿಮಾನ ನಿಲ್ದಾಣದಲ್ಲಿ ಇಳಿಯಲು ಸೂಚಿಸಲಾಯಿತು.
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಸಮಯದಲ್ಲಿ ಭಾರತದೊಂದಿಗೆ ಸ್ಥಗಿತಗೊಂಡಿದ್ದ ವಿಮಾನಯಾನ ಸೇವೆಯನ್ನು ಬಾಂಗ್ಲಾದೇಶ ಇತ್ತೀಚೆಗಷ್ಟೇ ಪುನರಾರಂಭಿಸಿದೆ.